ಒಕ್ಕಲಿಗ ಸಂಘದ ಚುನಾವಣೆ: ರಮೇಶ್ ಹೆಗ್ಡೆ ಬಣಕ್ಕೆ ಜಯ

okkaliga
ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಮೇಶ್ ಹೆಗ್ಡೆ ಬಣದ ಚೇತನ್ ಅವರಿಗೆ ಸಮಾಜ ಬಾಂಧವರು ಸಿಹಿ ತಿನ್ನಿಸಿ ಸಂಭ್ರಮಿಸಿದರು.
Published on

ಶಿವಮೊಗ್ಗ: ಜಿಲ್ಲಾ ಒಕ್ಕಲಿಗ ಸಂಘದ ಆಡಳಿತ ಮಂಡಳಿಯ 20 ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ನಗರಪಾಲಿಕೆ ಮಾಜಿ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ನೇತೃತ್ವದ 17 ಮಂದಿ ಗೆಲುವು ಸಾಧಿಸಿದ್ದಾರೆ.

ಆ.11ರಂದು ಚುನಾವಣೆ ನಡೆದಿತ್ತು. ವಕೀಲ ಎ.ಪಿ.ಕೃಷ್ಣಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 20 ನಿರ್ದೇಶಕ ಸ್ಥಾನಕ್ಕೆ 29 ಜನ ಸ್ಪರ್ಧಿಸಿದ್ದರು. ಒಟ್ಟು 4,137 ಮತಗಳ ಪೈಕಿ 2,599 ಮತಗಳು ಚಲಾವಣೆಗೊಂಡಿದ್ದವು. ನೂತನ ನಿರ್ದೇಶಕರ ಆಯ್ಕೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿ.ಎ. ರಮೇಶ್ ಹೆಗ್ಡೆ ಬಣ ಸಂಭ್ರಮಾಚರಣೆ ನಡೆಸಿತು.
ವಿಜೇತರು, ಪಡೆದ ಮತಗಳ ವಿವರ: ಬಿ.ಎ. ರಮೇಶ್ ಹೆಗ್ಡೆ (2001), ರವಿಕುಮಾರ್ (1856), ಕಡಿದಾಳ್ ಗೋಪಾಲ್ ( 1805), ಆಶಿತ್ ಬಳಗಟ್ಟೆ (1630), ಬಂಡೆ ವೆಂಕಟೇಶ್ (1527), ಸುದರ್ಶನ್ ತಾಯಿಮನೆ (1,461), ಎಂ.ಎ.ರಮೇಶ ಹೆಗ್ಡೆ (1442), ಉಂಬ್ಳೆಬೈಲು ಮೋಹನ್ (1436), ಪುಟ್ಟಸ್ವಾಮಿ (1417), ಆದಿಮೂರ್ತಿ (1410), ಪ್ರತಿಮಾ ಡಾಕಪ್ಪ (1367), ರಮೇಶ್ ಬಿ. ನಾಯಕ್ (1366), ನೀರುಳ್ಳಿ ನಾಗರಾಜ್ (1342), ಸುಂದರೇಶ್ (1301), ಸುಮಿತ್ರಾ ಕೇಶವಮೂರ್ತಿ (1,298), ಭಾರತಿ ರಾಮಕೃಷ್ಣ (1262), ಚೇತನ್ ಗೌಡ (1260), ಅನ್ನಪೂರ್ಣಾ (1259), ಸಹನಾ (1055), ವನಮಾಲಾ (1031) ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net