ದಿನಕ್ಕೆ 7ರಿಂದ 8 ಲೀಟರ್​​! ಯಾರು ಈ 'ಆಯಿಲ್​ ಕುಮಾರ'; ಈತ ಆರೋಗ್ಯವಾಗಿರಲು ಹೇಗೆ ಸಾಧ್ಯ? | Oil Kumar

ವಿಜಯವಾಣಿ (96)
Published on

Oil Kumar: ಕಳೆದ ಒಂದೆರೆಡು ವಾರಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಶಿವಮೊಗ್ಗದ 'ಆಯಿಲ್​ ಕುಮಾರ್' ಎಂಬ ವ್ಯಕ್ತಿ, ತಿಂಡಿ-ಊಟ ಏನ್ನನ್ನೂ ಸೇವಿಸದೆ, ಕೇವಲ ವಾಹನಗಳಿಗೆ ಬಳಸುವ ಇಂಜಿನ್ ಆಯಿಲ್ ಅನ್ನೇ ಕುಡಿದು ಆರೋಗ್ಯದಿಂದ ಬದುಕುತ್ತಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ಪ್ರತಿನಿತ್ಯ 7ರಿಂದ 8 ಲೀಟರ್​ ಇಂಜಿನ್ ಆಯಿಲ್​ ಇವರ ಆಹಾರ ಎಂದರೆ ನಂಬ್ತೀರಾ? ಇಲ್ಲ ಎಂದರೂ ನಂಬಲೇಬೇಕು.

ಕಳೆದ 33 ವರ್ಷಗಳಿಂದ ಇಂಜಿನ್ ಆಯಿಲ್​ ಕುಡಿದೇ ಜೀವನ ಸಾಗಿಸುತ್ತಿರುವ ಆಯಿಲ್ ಕುಮಾರ್​. ಮೂಲತಃ ಶಿವಮೊಗ್ಗ ಜಿಲ್ಲೆಯವರು. ಇತ್ತೀಚೆಗಷ್ಟೇ, ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಡಲಾದ ವಿಡಿಯೋವೊಂದರಲ್ಲಿ ಇವರ ಬಗ್ಗೆ ವ್ಯಕ್ತಿಯೊಬ್ಬರು ವಿವರಿಸಿದ್ದರು. ಆಯಿಲ್​ ಜತೆಗೆ ಚಹಾ ಕೂಡ ಸೇವನೆ ಮಾಡುತ್ತಾರೆ. ಇವರೆಡರಲ್ಲಿ ಟೀ ಅಂತಹ ವಿಷಕಾರಿ ಅಂಶ ಅಥವಾ ಕೆಮಿಕಲ್​ಗಳನ್ನು ಹೊಂದಿಲ್ಲ. ಆದರೆ, ಆಯಿಲ್​ನಲ್ಲಿ ವಿಷಕಾರಿ ಅಂಶಗಳಿದ್ದು, ಇದು ಕುಡಿಯಲು ಯೋಗ್ಯವಲ್ಲ. ಇಷ್ಟಾದರೂ ಇದೇ ಕುಮಾರ್​ ಅವರ ಜೀವಾಳ ಎಂಬ ಸಂಗತಿ ಸದ್ಯ ಅನೇಕರಿಗೆ ಅರಗಿಸಿಕೊಳ್ಳಲು ಅಸಾಧ್ಯವಾಗಿದೆ.

ಆರೋಗ್ಯಕ್ಕಿಲ್ಲ ಯಾವ ಸಮಸ್ಯೆ!

ಇಂಜಿನ್​ ಆಯಿಲ್​ ಕುಡಿದು ಬದುಕುತ್ತಿರುವ ಕುಮಾರ್​ಗೆ ಇಲ್ಲಿಯವರೆಗೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಿಲ್ಲವಂತೆ. ಅಷ್ಟು ವರ್ಷಗಳಿಂದ ಆಯಿಲ್ ಕುಡಿಯುತ್ತಿರುವ ವ್ಯಕ್ತಿ, ನೋವಿನಿಂದಲೋ ಅಥವಾ ಮತ್ತೊಂದು ಸಮಸ್ಯೆಯಿಂದಲೋ ಆಸ್ಪತ್ರೆ ಮುಖ ನೋಡಿಲ್ಲವಂತೆ. ಈ ಕ್ಷಣದವರೆಗೂ ತಮಗೆ ಒಂದೇ ಒಂದು ಸಣ್ಣ ಬಾಧೆಯೂ ಕಾಣಿಸಿಕೊಂಡಿಲ್ಲ ಎಂಬ ಕುಮಾರ್​ ಮಾತು ಅಕ್ಷರಶಃ ಅಚ್ಚರಿಗೆ ದೂಡುವಂತ ವಿಷಯವೇ ಸರಿ.

ದೇವರ ಅನುಗ್ರಹವೇ ಇಷ್ಟಕ್ಕೆಲ್ಲ ಕಾರಣ!

ತಾನು ಬದುಕುಳಿದಿದ್ದೇನೆ ಎಂದರೆ ಅದಕ್ಕೆ ನಾನು ನಂಬುವ ಅಯ್ಯಪ್ಪ ಸ್ವಾಮಿಯೇ ಕಾರಣ. ದೇವರ ಆಶೀರ್ವಾದಿಂದಲೇ ನನ್ನ ಜೀವನ ನಡೆಯುತ್ತಿದೆ. ಇಷ್ಟು ವರ್ಷಗಳ ಕಾಲದಿಂದಲೂ ಇಂಜಿನ್ ಆಯಿಲ್ ಕುಡಿಯುತ್ತಿದ್ದೇನೆ. ಹೀಗಿದ್ದಮೇಲೆ ಆರೋಗ್ಯಕ್ಕೆ ಏನು ತೊಂದರೆಯಾಗದೆ ಜೀವಿಸುತ್ತಿದ್ದೇನೆ ಎಂದರೆ ಅದು ಸ್ವಾಮಿಯೇ ಕಾರಣ ಎಂದು ತಮ್ಮ ಆಳವಾದ ನಂಬಿಕೆಯನ್ನು ಹಂಚಿಕೊಂಡಿದ್ದಾರೆ ಕುಮಾರ್.

ಆಯಿಲ್​ ಕುಡಿತದಿಂದ ಏನೆಲ್ಲ ತೊಂದರೆ?

ಇಂಜಿನ್ ಆಯಿಲ್​ನಲ್ಲಿರುವ ರಾಸಾಯನಿಕಗಳು, ಮನುಷ್ಯನ ಶ್ವಾಸಕೋಶ ಪ್ರವೇಶಿಸಿದಾಗ ಉರಿಯೂತ ಮತ್ತು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿ ಮಾಡುತ್ತದೆ. ದೀರ್ಘಕಾಲದವರೆಗೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಅಂಗಾಂಗ ವೈಫಲ್ಯ, ನರವೈಜ್ಞಾನಿಕ ಹಾನಿ ಅಥವಾ ಸಾವಿಗೂ ಕಾರಣವಾಗಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net