ಆಯ್ಯೋ... ಸುಶೀಲಾ ಇಂಥ ಕೆಲಸ ಮಾಡಬಾರದಿತ್ತು! | Sushila

photo (32)
Published on

Sushila: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಚೂಚುಕೊಂಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಚೂಚುಗೊಂಡ ಗ್ರಾಮದ ನಿವಾಸಿ ಅದಾರಿ ಸೂರಿ ನಾಗೇಶ್ವರ್ ರಾಂ ಪತ್ನಿ ಸುಶೀಲಾ(35) ಮೃತೆ. ದಂಪತಿಗೆ ಒಬ್ಬ ಮಗ, ಮಗಳಿದ್ದಾರೆ.

ತನ್ನ ಮಗನೊಂದಿಗೆ ಹೊಲಕ್ಕೆ ಹೋಗಿದ್ದ ಸುಶೀಲಾ, ಮಧ್ಯಾಹ್ನ ಮನೆಗೆ ಬಂದ ಬಳಿಕ ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯರ ಸಹಾಯದಿಂದ ಪೊಲೀಸರು ಶವ ಕೆಳಗಿಳಿಸಿದ್ದಾರೆ. ಈ ಕುರಿತು ಮುನಗಪಾಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

''ಕೆಲ ಸಮಯದಿಂದ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಹೀಗಾಗಿ, ಆಸ್ಪತ್ರೆ ದಾಖಲಿಸಲಾಗಿತ್ತು. ಮನೆಗೆ ಬಂದ ಬಳಿಕ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಳು'' ಎಂದು ಪತಿ ಅದಾರಿ ಸೂರಿ ನಾಗೇಶ್ವರ್ ರಾಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net