

ತಮಿಳುನಾಡು: ಪ್ರೀತಿಸಿದ ಯುವಕನಿಗಾಗಿ ಯುವತಿಯೊಬ್ಬಳು ಏಕಾಂಗಿಯಾಗಿ ದೇಶ(Sri Lanka) ದಾಟಿ ಬಂದ ಕಥೆ ಇದು.
ಹೌದು, ಪ್ರಿಯಕರಿನಿಗಾಗಿ ಯುವತಿಯೊಬ್ಬಳು ತನ್ನಲ್ಲಿದ್ದ ಒಡವೆಗಳನ್ನು ಮಾರಾಟ ಮಾಡಿ ಶ್ರೀಲಂಕಾದಿಂದ ಭಾರತದ ತಮಿಳುನಾಡಿನ ರಾಮೇಶ್ವರಂ ಸಮೀಪದ ಧನುಷ್ಕೋಟಿಯಲ್ಲಿ ಬಂದಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಒಬ್ಬ ಯುವತಿ ಭಾರತಕ್ಕೆ ಆಕ್ರಮವಾಗಿ ಬಂದಿರುವ ಮಾಹಿತಿ ಕೊಸ್ಟಲ್ ಗಾರ್ಡ್ಗೆ ತಿಳಿಯುತ್ತದೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ದಳದ ಪೊಲೀಸರು ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಶ್ರೀಲಂಕಾದ ಮನ್ನಾರ್ ಮೂಲದ ವಿದುರ್ಷಿಯಾ (25) ತನ್ನ ತಾಯಿ ಮತ್ತು ತಂದೆಯೊಂದಿಗೆ ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯ ಪಳನಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ, ಅವರು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಕಳೆದ ಏಪ್ರಿಲ್‌ನಲ್ಲಿ ಅವರು ಶ್ರೀಲಂಕಾಕ್ಕೆ ಹೋಗಿದ್ದರು ಆದರೆ ಭಾರತಕ್ಕೆ ಮರಳಲು ವೀಸಾ ಪಡೆಯಲು ಸಾಧ್ಯವಾಗಲಿಲ್ಲ.
ಆದರೆ, ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಕಳ್ಳ ದೋಣಿಯಲ್ಲಿ ಬರಲು ನಿರ್ಧರಿಸಿದಳು. ಇದಕ್ಕಾಗಿ, ಮಹಿಳೆ ತನ್ನ ಆಭರಣಗಳನ್ನು ಮಾರಿ ಸಂಪಾದಿಸಿದ ಹಣದಿಂದ ತಲೈಮನ್ನಾರ್ ಬೀಚ್‌ನಿಂದ ಪ್ಲಾಸ್ಟಿಕ್ ದೋಣಿ ಹತ್ತಿ ಅರಿಚಲ್ ಮುನೈ ತಲುಪಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)