ಹುಮಾಯೂನ್ ಸಮಾಧಿ ಬಳಿಯ ದರ್ಗಾದ ಛಾವಣಿ ಕುಸಿದು 5 ಜನ ಸಾವು!

photo (25)
Published on

ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಹುಮಾಯೂನ್ ಸಮಾಧಿಯ ಬಳಿಯಲ್ಲಿನ ದರ್ಗಾ ಷರೀಫ್ ಪಟ್ಟೆ ಷಾ ಒಳಗಿನ ಕೋಣೆಯ ಛಾವಣಿ ಮತ್ತು ಗೋಡೆಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದ ಹಿನ್ನೆಲೆ 5 ಜನರು ಶುಕ್ರವಾರ ಮೃತಪಟ್ಟಿದ್ದಾರೆ.

ಅನೇಕರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ 3 ಪುರುಷರು, 2 ಮಹಿಳೆಯರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net