Abhishek Sharma: 'ಓ ಮೈ ಗಾಡ್': ದೀಪಾವಳಿ ಹಬ್ಬಕ್ಕೆ ಶಾಲೆ ಟೀಚರ್‌ಗೆ ವಿಶ್ ಮಾಡಿ ಸರ್‌ಪ್ರೈಸ್ ನೀಡಿದ ಅಭಿಷೇಕ್ ಶರ್ಮಾ!

Abhishek Sharma school teacher
ದೀಪಾವಳಿ ಹಬ್ಬದ ವೇಳೆ ತಮ್ಮ ಶಾಲಾ ಶಿಕ್ಷಕಿಗೆ ಸರ್‌ಪ್ರೈಸ್ ನೀಡಿದ ಕ್ರಿಕೆಟಿಗ ಅಭಿಷೇಕ್ ಶರ್ಮಾ
Published on: 

Abhishek Sharma school teacher: ಟೀಮ್ ಇಂಡಿಯಾದ ಉದಯೋನ್ಮುಖ ಯುವ ಓಪನರ್ ಅಭಿಷೇಕ್ ಶರ್ಮಾ ತಮ್ಮ ಸರಳತೆ ಮತ್ತು ಗುರುಭಕ್ತಿಯಿಂದ ನೆಟ್ಟಿಗರ ಮನ ಗೆದ್ದಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅವರು ತಮ್ಮ ಶಾಲಾ ಶಿಕ್ಷಕಿಗೆ ನೀಡಿದ ದಿಢೀರ್ ಸರ್‌ಪ್ರೈಸ್ ವಿಸಿಟ್‌ನ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ದೀಪಾವಳಿ ಆಚರಣೆ ವೇಳೆ ಅಭಿಷೇಕ್ ಶರ್ಮಾ ತಮ್ಮ ಶಿಕ್ಷಕಿಯ ಮನೆಯ ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಕಾರಿನಿಂದ ಕೆಳಗಿಳಿದ ಅವರು, ರಸ್ತೆ ದಾಟಿ ಗೇಟ್ ಬಳಿಗೆ ಬಂದಿದ್ದಾರೆ. ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದು ನಿಂತ ಅಭಿಷೇಕ್‌ನನ್ನು ನೋಡುತ್ತಿದ್ದಂತೆ ಶಿಕ್ಷಕಿಗೆ ಆಶ್ಚರ್ಯದ ಜತೆಗೆ ಅಪಾರ ಸಂತೋಷವಾಗಿದೆ.

'ಓ ಮೈ ಗಾಡ್' ಎಂದ ಟೀಚರ್

ತಮ್ಮ ನೆಚ್ಚಿನ ವಿದ್ಯಾರ್ಥಿಯನ್ನು ಇಷ್ಟೊಂದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಕಂಡ ತಕ್ಷಣ ಶಿಕ್ಷಕಿ ಆಶ್ಚರ್ಯದಿಂದ ‘ಓ ಮೈ ಗಾಡ್! ಇದು ನಿಜಕ್ಕೂ ದೊಡ್ಡ ಸರ್‌ಪ್ರೈಸ್!’ ಎಂದು ಉದ್ಗರಿಸಿದ್ದಾರೆ. ತಕ್ಷಣವೇ ಅಭಿಷೇಕ್‌ನನ್ನು ಪ್ರೀತಿಯಿಂದ ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮನೆಯ ಗೇಟ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಸುಂದರ ಕ್ಷಣ ಸೆರೆಯಾಗಿದೆ.

ಇದನ್ನೂ ಓದಿ: ದೀಪಾವಳಿಯಲ್ಲಿ 'ಹೆಲಿಕಾಪ್ಟರ್' ಸ್ಟಂಟ್ ಮಾಡಿದ ಅಂಕಲ್: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು! | Diwali firecracker stunt

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಎಷ್ಟೇ ಎತ್ತರಕ್ಕೆ ಬೆಳೆದರೂ ಕಲಿಸಿದ ಗುರುಗಳನ್ನು ಮತ್ತು ನಡೆದ ಬಂದ ಹಾದಿಯನ್ನು ಮರೆಯಬಾರದು ಎಂಬುದಕ್ಕೆ ಅಭಿಷೇಕ್ ಶರ್ಮಾ ಅವರ ಈ ನಡೆ ಉತ್ತಮ ಉದಾಹರಣೆಯಾಗಿದೆ. ಗುರು-ಶಿಷ್ಯರ ನಡುವಿನ ಈ ಪವಿತ್ರ ಹಾಗೂ ಭಾವನಾತ್ಮಕ ಸಂಬಂಧದ ವಿಡಿಯೋಗೆ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.