Dangerous Diwali stunt: ದೀಪಾವಳಿ ಆಚರಣೆ ವೇಳೆ ನೆಟ್ಟಿಗರನ್ನು ಶಾಕ್ ಮಾಡುವಂಥ ವಿಡಿಯೋವೊಂದು ಎಕ್ಸ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗ್ತಿದೆ. ಕಿಂಚಿತ್ತೂ ಭಯವಿಲ್ಲದೆ ಅಂಕಲ್ ಒಬ್ಬರು ಮಾಡಿದ ಅಪಾಯಕಾರಿ ಸ್ಟಂಟ್ ನೋಡಿ ಜನ ಹುಬ್ಬೇರಿಸಿದ್ದಾರೆ.
‘ಹಬ್ಬದ ಸಂಭ್ರಮದ ನಡುವೆ ರಸ್ತೆಯಲ್ಲೇ ನಡೆದ ಈ ಸಾಹಸದ ವಿಡಿಯೋ ಈಗ ಟ್ರೆಂಡಿಂಗ್‌ನಲ್ಲಿದೆ. ಉರಿಯುವ ಮತ್ತು ಕಿಡಿ ಕಾರುವ ಪಟಾಕಿಯನ್ನು ತಲೆಯ ಮೇಲೆ ಹೆಲಿಕಾಪ್ಟರ್‌ನಂತೆ ವೇಗವಾಗಿ ತಿರುಗಿಸಿ ಅಂಕಲ್ ಒಬ್ಬರು ಮಾಡಿದ ಈ ಸ್ಟಂಟ್ ನೋಡಿ ಸೋಶಿಯಲ್ ಮೀಡಿಯಾ ಮಂದಿ ಕಂಗಾಲಾಗಿದ್ದಾರೆ. ನೆಟ್ಟಿಗರಂತೂ ಇದನ್ನು 'ದೀಪಾವಳಿ ಹೆಲಿಕಾಪ್ಟರ್ ಸ್ಟಂಟ್' ಅಂತಲೇ ವೈರಲ್ ಮಾಡುತ್ತಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕ ನೆಟ್ಟಿಗರು ಕಮೆಂಟ್ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಲೈಕ್ಸ್ ಮತ್ತು ವೈರಲ್ ಆಗುವುದಕ್ಕಾಗಿ ಇಂತಹ ಹುಚ್ಚಾಟ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ನೆನಪಿಡಿ, ಪಟಾಕಿಗಳೊಂದಿಗೆ ಇಂತಹ ಸಾಹಸ ಮಾಡುವುದು ಖಂಡಿತಾ ಸಾಹಸವಲ್ಲ, ಸಾವಿಗೆ ಆಹ್ವಾನವಷ್ಟೇ. ಕೈಯಲ್ಲಿ ಪಟಾಕಿ ಹಿಡಿದು ತಿರುಗಿಸುವುದರಿಂದ ತೀವ್ರ ಸುಟ್ಟ ಗಾಯಗಳು ಮತ್ತು ಶಾಶ್ವತ ವೈಕಲ್ಯದಂತಹ ಗಂಭೀರ ಅಪಾಯಗಳು ಕಾದಿರುತ್ತವೆ. ಪ್ರಾಣಕ್ಕೆ ಕಂಟಕ ತರುವ ಇಂತಹ ಹುಚ್ಚಾಟಗಳಿಗೆ ಯಾರೂ ಕೈಹಾಕಬೇಡಿ.