

ಬೆಂಗಳೂರು: ಅಮರ್ ಶೆಟ್ಟಿ ಎಂಬ ಯುವಕನ ಸಾವಿಗೆ ಕಾರಣವಾದ ಆರೋಪದಡಿ ಕೆ.ಪಿ. ಅಗ್ರಹಾರ ೪ ನೇ ಕ್ರಾಸ್ ನಲ್ಲಿರುವ ಭಾಗ್ಯ ಕ್ಲಿನಿಕ್‌ಗೆ ಆರೋಗ್ಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಆ.೧೩ ರಂದು ಭಾಗ್ಯ ಕ್ಲಿನಿಕ್‌ಗೆ ಹೋಗಿ ಚುಚ್ಚು ಮದ್ದು ಪಡೆದುಕೊಂಡಿದ್ದ ಅಮರ್ ಎಂಬ ಯುವಕ ೧೮ ರಂದು ಮೃತಪಟ್ಟಿದ್ದ. ಅಮರ್ ಸಾವಿಗೆ ಕಾರಣವಾಗಿದ್ದ ಭಾಗ್ಯ ಕ್ಲಿನಿಕ್‌ಗೆ ಸೋಮವಾರ ಭೇಟಿ ನೀಡಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕ್ಲಿನಿಕ್ ಅನ್ನು ಬಂದ್ ಮಾಡಿಸಿದ್ದಾರೆ.
ಭಾಗ್ಯ ಕ್ಲಿನಿಕ್‌ನ ವೈದ್ಯರ ಬೇಜವಾಬ್ದಾರಿ ಬಗ್ಗೆ ಹಾಗೂ ಅಮರ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ಆಗ್ರಹಿಸಿದ್ದರು. ಈ ಸಂಬಂಧ ಆರೋಗ್ಯ ಸಚಿವರು, ಆರೋಗ್ಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ವಸಂತನಗರದ ಕರ್ನಾಟಕ ಮೆಡಿಕಲ್ ಕೌನ್ಸಿಲ್ಗೆ ಸಹ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ಇಂಜೆಕ್ಷನ್ ನೀಡಿದ ಡಾ.ರಂಜಿತ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ.