ರಸಪ್ರಶ್ನೆಯಲ್ಲಿ ಒಡಿಶಾದ ದುರ್ಗೇಶ್‌ಸಿಂಗ್ ಪ್ರಥಮ

HUN-JULY-31-3(N HOLE QUIZ PROGRAMME
Published on


ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವತಿಯಿಂದ ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ವೆಬಿನಾರ್ ಮೂಲಕ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಡಿಶಾ ರಾಜ್ಯದ ಭುವನೇಶ್ವರ್ ನಗರದ ದುರ್ಗೇಶ್‌ಸಿಂಗ್ 2549 ಅಂಕಗಳೊಂದಿಗೆ ಪ್ರಥಮಸ್ಥಾನ ಗಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ದೇಶಾದ್ಯಂತ ಒಟ್ಟು 153 ಮಂದಿ ಭಾಗವಹಿಸಿದ್ದರು. ದ್ವಿತೀಯ ಸ್ಥಾನವನ್ನು ಅಶ್ವಿನ್ ಹಾಗೂ ತೃತೀಯ ಸ್ಥಾನವನ್ನು ಜಾರ್ಖಂಡ್‌ನ ಆಯುಷ್‌ಕುಮಾರ್ ಗಿಟ್ಟಿಸಿಕೊಂಡರು.

ಈ ವೇಳೆ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್, ಉದ್ಯಾನವನದಲ್ಲಿ ಪ್ರತಿ 100 ಚದರ ಕಿ.ಮೀ.ಗೆ 12 ಹುಲಿಗಳು ಆವಾಸಸ್ಥಾನ ಮಾಡಿಕೊಂಡಿವೆ. ಹುಲಿ ಸಾಂದ್ರತೆಯಲ್ಲಿ ರಾಜ್ಯದ 5 ಹುಲಿ ಸಂರಕ್ಷಿತಾರಣ್ಯದ ಪೈಕಿ ನಾಗರಹೊಳೆ ಪ್ರಥಮಸ್ಥಾನದಲ್ಲಿದೆ. ಇದೀಗ ಉದ್ಯಾನವನ ವ್ಯಾಪ್ತಿಯ 200 ಚ.ಕಿ.ಮೀ. ಬಫರ್ ಜೋನ್ ಕೂಡ ವನ್ಯಜೀವಿ ವಿಭಾಗಕ್ಕೆ ಸೇರ್ಪಡೆಯಾಗಿದ್ದು, ಹುಲಿಗಳ ಸಂರಕ್ಷಣೆ ಇನ್ನಷ್ಟು ಉತ್ತಮವಾಗಲಿದೆ ಎಂದರು.

ಪಿಸಿಸಿಎಫ್ ಅಜಯ್‌ಮಿಶ್ರಾ ರಾಜ್ಯದ ಹುಲಿ ಸಂರಕ್ಷಣೆ ಕುರಿತಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಸಿಸಿಎಫ್ ಹೀರಾಲಾಲ್, ಕಾರ್ಯ ಯೋಜನೆಯ ಡಿಸಿಎಫ್ ದೀಪಾ ಜೆ.ಕಂಟ್ರಾಕ್ಟರ್ ಭಾಗವಹಿಸಿದ್.

ಮೊದಲ ಮೂರು ಸ್ಥಾನ ಗಳಿಸಿದವರಿಗೆ ನಾಗರಹೊಳೆಯಲ್ಲಿ ಒಂದು ರಾತ್ರಿ ಎರಡು ಹಗಲುಗಳ ಕಾಲ ತಂಗಲು ಅವಕಾಶ ಕಲ್ಪಿಸಲಾಗಿದೆ. ಮಿಕ್ಕವರಿಗೆ ದಮ್ಮನಕಟ್ಟೆ ಸಫಾರಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೊದಲ ಮೂರು ಸ್ಥಾನಗಳ ನಂತರದ 10 ಜನ ವಿಜೇತರ ಪೈಕಿ ಮೈಸೂರಿನ ಸಿ.ನವೀನ್‌ಕುಮಾರ್, ಬೆಂಗಳೂರಿನ ಅರವಿಂದ ರಾಮಕೃಷ್ಣನ್, ಡಿ.ಸಂಧ್ಯಾ, ಚೆನ್ನೈನ ಶ್ಯಾಂ, ಶಿರಸಿ ಅರಣ್ಯ ಕಾಲೇಜಿನ ಎಸ್.ಭರತ್, ಧಾರವಾಡದ ಹೇಮಂತ್ ಬ್ಯಾಟರಿ, ಸೋಮವಾರಪೇಟೆಯ ಅಕ್ಷಯ್, ಹಾವೇರಿಯ ಗಂಗಾಧರ್ ಬೆಳಕೇರಿ, ಬೆಳಗಾವಿಯ ಸಚ್ಚಿನ್ ಶಿರೋಲ್ ಹಾಗೂ ಜೆ.ಅಮಿತ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net