ತಹಸೀಲ್ದಾರ್​ ಕಾರಿನ ಮೇಲೆ ಹಾಡಹಗಲಲ್ಲೇ ದಾಳಿ ಮಾಡಿದ ಯುವಕ..!

Car
Published on

ಜಗತ್ಸಿಂಗ್​ಪುರ್​: ಯುವಕನೊಬ್ಬ ತಹಸೀಲ್ದಾರ್ ಕಾರಿನ​ ಮೇಲೆ ಹಾಡಹಗಲಲ್ಲೇ ದಾಳಿ ಮಾಡಿರುವ ಘಟನೆ ಒಡಿಶಾದ ಜಗತ್ಸಿಂಗ್​ಪುರ್ ಜಿಲ್ಲೆಯ ಜಪ ಛ್ಚಾಕ್​ನಲ್ಲಿ ನಡೆದಿದೆ. ಕರೊನಾ ಲಾಕ್​ಡೌನ್​ ಮಾನದಂಡಗಳ ಜಾರಿಗಾಗಿ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಜಪ ಚ್ಛಾಕ್​ನಲ್ಲಿ ಲಾಕ್​ಡೌನ್​ ನಿಯಮ ಮೀರಿ ಅಂಗಡಿಗಳನ್ನು ತೆರೆದು ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಬಳಿಕ​ ತಹಸೀಲ್ದಾರ್​ ಚೌಧರಿ ಪ್ರಜ್ಞಾನಂದನ್ ದಾಸ್ ನೇತೃತ್ವದ ತಂಡವೊಂದು ಅಲ್ಲಿಗೆ ತೆರಳಿತ್ತು. ಅಂಗಡಿಯನ್ನು ಮುಚ್ಚಿಸಿ, ಅದರ ಮಾಲೀಕರಿಗೆ ಎಚ್ಚರಿಕೆ ನೀಡಿ ಹೊರಡಬೇಕೆನ್ನುವಷ್ಟರಲ್ಲಿ ಘಟನೆ ನಡೆದಿದೆ.

ಓರ್ವ ಅಂಗಡಿಯವ ತಹಸೀಲ್ದಾರ್​ ಕಾರಿಗೆ ಕಾಲಿನಿಂದ ಒದ್ದು, ಕಿಟಕಿಗೆ ಕಲ್ಲು ಬೀಸಾಡಿದ್ದು, ಸಂಪೂರ್ಣ ಹಾನಿಯಾಗಿದೆ. ಈ ವೇಳೆ ಅಧಿಕಾರಿಗಳು ಸಹ ಕಾರಿನ ಒಳಗಡೆಯೇ ಇದ್ದರು.

ಹೇಗೋ ಅವನಿಂದ ಹಾನಿಯಾಗದಂತೆ ತಪ್ಪಿಸಿಕೊಂಡ ಅಧಿಕಾರಿಗಳು ತಕ್ಷಣ ಎರಸಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಯುವಕ ಅಥವಾ ಅಂಗಡಿಯವನನ್ನು ಬಂಧಿಸಲಾಗಿದ್ದು, ಆತನನ್ನು ಚಂದನ್​ ಬೆಹೆರಾ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net