ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು ಅಪಘಾತ! ಒಬ್ಬ ಸಾವು.. ಎಂಟು ಮಂದಿಗೆ ಗಾಯ; Odisha

odisha
Published on

Odisha : ಒಡಿಶಾದ ಕಟಕ್ ಜಿಲ್ಲೆಯಲ್ಲಿ ಭಾನುವಾರ (30) ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಎಂಟಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ರೈಲು ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಯ ಕಾಮಾಕ್ಯ ನಿಲ್ದಾಣದ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಬೆಳಗ್ಗೆ 11.54ಕ್ಕೆ ಮಂಗುಲಿ ಬಳಿಯ ನೆರ್ಗುಂಡಿಯಲ್ಲಿ ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡ ಎಂಟಕ್ಕೂ ಹೆಚ್ಚು ಮಂದಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಇನ್ನೂ ಡಿಆರ್‌ಎಂ ಖುರ್ದಾ ರಸ್ತೆ ಮತ್ತು ಜನರಲ್ ಮ್ಯಾನೇಜರ್ ಈಸ್ಟ್ ಕೋಸ್ಟ್ ರೈಲ್ವೆ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ. ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ರೈಲ್ವೆ ತಿಳಿಸಿದೆ.

ಘಟನೆ ಬಗ್ಗೆ ಈಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಅಶೋಕ್ ಕುಮಾರ್ ಮಿಶ್ರಾ ಮಾತನಾಡಿದ್ದು, NDRF ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಸ್ಥಳಕ್ಕೆ ಪರಿಹಾರ ರೈಲನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net