

ಅಬುಧಾಬಿ: ಜೂನ್ 02ರಂದು ಒಡಿಶಾದ ಬಾಲಾಸೋರ್ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು, 1,200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ ಬಾಣಸಿಗ ಸಹಜನ್ ಮೊಹಮ್ಮದ್ ಎಂಬುವವರು ತಾವು ಈಚೆಗೆ ಲಾಟರಿಯಲ್ಲಿ ಗೆದ್ದ 4 ಲಕ್ಷ ರೂ. ಹಣವನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಒಡಿಶಾದ ಜಸ್ಪುರ್ ಮೂಲಕ ಸಹಜನ್ ಈಚೆಗೆ ಡ್ರೀಮ್ ಐಲ್ಯಾಂಡ್ ಸ್ಕ್ರ್ಯಾಚ್ಕಾರ್ಡ್ ಆಟದಲ್ಲಿ 20 ಸಾವಿರ ದಿರ್ಹಾಂ(4, 48, 885 ರೂಗಳನ್ನು) ಬಹುಮಾನವಾಗಿ ಗೆದ್ದಿದ್ದರು.
ಈ ಕುರಿತು ಮಾತನಾಡಿರುವ ಸಹಜನ್ ಅದೃಷ್ಟವಶಾತ್ ಭೀಕರ ರೈಲು ಅಪಘಾತದಲ್ಲಿ ನನ್ನ ಪರಿಚಿತ ವ್ಯಕ್ತಿಗಳು ಯಾರು ಇರಲಿಲ್ಲ. ದುರಂತದಲ್ಲಿ ನನ್ನ ಗ್ರಾಮದವರು ಕೆಲವರು ಗಾಯಗೊಂಡಿದ್ದಾರೆ. ನಾನು ಮೊದಲು ಅವರಿಗೆ ಸಹಾಯ ಮಾಡುತ್ತೇನೆ.
ಜೂನ್ 25ರಂದು ನಾನು ನನ್ನ ತವರಿಗೆ ಮರಳುತ್ತಿದ್ದು, ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವುದರ ಜೊತೆಗೆ ಉಳಿದ ಹಣವನ್ನು ಮನೆ ಉಪಯೋಗಕ್ಕೆ ಉಪಯೋಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.