VIDEO| ಕಣ್ಣು ಮಿಟುಕಿಸುವಷ್ಟರಲ್ಲಿ ಕೊಚ್ಚಿ ಹೋದ ಯುವತಿ: ಸೆಲ್ಫಿ ದುರಂತದ ಭಯಾನಕ ವಿಡಿಯೋ ವೈರಲ್​!

Girl Selfie '
Published on

ಭುವನೇಶ್ವರ್​: ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಪೋಸ್​ ನೀಡುವ ಮುನ್ನ ತಾವು ನಿಂತ ಸ್ಥಳ ಎಷ್ಟು ಸುರಕ್ಷಿತ ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಏನು ನಡೆಯಬಹುದು ಎಂಬುದಕ್ಕೆ ಒಡಿಶಾದಲ್ಲಿ ನಡೆದ ಈ ಒಂದು ಘಟನೆ ಉದಾಹರಣೆಯಾಗಿದೆ.

ಹೌದು. ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯೊಬ್ಬಳು ಕಾಲು ಜಾರಿ ನದಿಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದಲ್ಲಿ ಜನವರಿ 10ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಒಡಿಶಾದ ಸುಂದರಗಢ್​ ಜಿಲ್ಲೆಯಲ್ಲಿರುವ ಕನಕುಂದಾದ ನದಿಯಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನು ನಿರುಪಮಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ನದಿಯಲ್ಲಿ ಕೊಚ್ಚಿ ಹೋದ ಯುವತಿ ಕೊನೆಗೆ ನದಿಯ ಜಲಪಾತದ ಕೆಳಗೆ ಶವವಾಗಿ ಪತ್ತೆಯಾಗಿದಳು.

ವಿಡಿಯೋದಲ್ಲಿ ಏನಿದೆ?: ನಿರುಪಮಾ ವೇಗವಾಗಿ ಹರಿಯುವ ನದಿಯ ಪಕ್ಕದಲ್ಲಿನ ಬಂಡೆ ಮೇಲೆ ನಿಂತು ಸೆಲ್ಫಿಗೆ ಪೋಸ್​ ನೀಡುವಾಗ ಪಕ್ಕದಲ್ಲಿ ಇದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಬೀಳುವಾಗ ನಿರುಪಮಾಳಿಗೂ ಆನತ ದೇಹ ತಾಗುತ್ತದೆ ಇದರಿಂದ ಸಮತೋಲನ ಕಳೆದುಕೊಳ್ಳುವ ಆಕೆ ಬಂಡೆಯಿಂದ ಜಾರಿ ನೀರಿನ ಒಳಗೆ ಬೀಳುತ್ತಾಳೆ. ಇದನ್ನೂ ನೋಡಿದ ಮತ್ತೊಬ್ಬ ಯುವತಿ ಜೋರಾಗಿ ಕಿರುಚಿಕೊಳ್ಳುತ್ತಾಳೆ. ಆದರೆ, ನೀರಿನ ಹರಿವು ಹೆಚ್ಚಾಗಿದ್ದರಿಂದ ನಿರುಪಮಾ ಕೊಚ್ಚಿ ಹೋಗುತ್ತಾಳೆ.

(ವಿಡಿಯೋ ಕೃಪೆ: OTV)

ಬೀಳುವಾಗ ಏನಾದರೂ ಹಿಡಿದುಕೊಳ್ಳಲು ಅನುಪಮಾ ಪ್ರಯತ್ನಪಟ್ಟರು ಸಹ ಸಾಧ್ಯವಾಗಲಿಲ್ಲ. ಘಟನೆ ಕಣ್ಣು ಮಿಟುಕಿಸುವುದರಲ್ಲಿ ನಡೆದಿದ್ದರಿಂದ ಸ್ಥಳದಲ್ಲಿದ್ದ ಇತರರು ಸಹ ಆಕೆಯ ರಕ್ಷಣೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಕೆಲವೇ ದೂರದಲ್ಲಿ ಜಲಪಾತದ ಕೆಳಗೆ ಬಂಡೆಯೊಂದಕ್ಕೆ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ನಿರುಪಮಾ ಶವ ಪತ್ತೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net