

ಪ್ಯಾರಿಸ್: 2019ರಲ್ಲಿ ಸಾಗರಗಳ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಭೂಮಿಯ ಹವಾಮಾನದ ಮೇಲೆ ಹಾನಿಕಾರಕ ಪರಿಣಾಮ ಬೀರಲಿದೆ ಎಂದು ಭೂವಿಜ್ಞಾನ ತಜ್ಞರು ತಿಳಿಸಿದ್ದಾರೆ.
ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಸೃಷ್ಟಿಯಾದ ಹೆಚ್ಚುವರಿ ಶಾಖದ 90 ಪ್ರತಿಶತಕ್ಕಿಂತಲೂ ಹೆಚ್ಚನ್ನು ಸಾಗರಗಳು ಹೀರಿಕೊಳ್ಳುತ್ತವೆ. ಸುಮಾರು 2 ಸಾವಿರ ಮೀಟರ್ ಆಳದವರೆಗೆ ಸಮುದ್ರದಲ್ಲಿ ಉಷ್ಣತೆ ಇರುವ ಬಗ್ಗೆ ಚೀನಾದ ಇನ್ಸ್ಟಿಟ್ಯೂಟ್ ಆಫ್ ಅಟ್ಮಾಸ್ಪಿಯರಿಕ್ ಫಿನಿಕ್ಸ್ (ಐಎಪಿ) ಸಂಗ್ರಹಿಸದ ದತ್ತಾಂಶವನ್ನೂ ವಿಶ್ವದ ಪ್ರಸಿದ್ಧ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಇದರಿಂದ 2019ರಲ್ಲಿ ಸಾಗರಗಳು ಈವರೆಗಿಗಿಂತ ಹೆಚ್ಚು ಬಿಸಿಯಾಗಿವೆ ಎಂದು ವಿಶ್ಲೇಷಿಸಲಾಗಿದೆ. ಈ ಅಧ್ಯಯನವು ಅಡ್ವಾನ್ಸಸ್ ಇನ್ ಅಟ್ಮಾಸ್ಪಿಯರಿಕ್ ಸೈನ್ಸಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಸಾಗರ ಉಷ್ಟಾಂಶ ಹೆಚ್ಚಳದ ಪರಿಣಾಮದಿಂದ ಭೂ ಹವಾಮಾನದಲ್ಲಿ ವಿಪರೀತ ಏರುಪೇರುಗಳಾಗಿವೆ. ಸಮುದ್ರ ಮಟ್ಟ ಹೆಚ್ಚಳ ಮತ್ತು ಸಮುದ್ರ ಜೀವಿಗಳ ಸಾವನ್ನಪ್ಪುತ್ತಿವೆ. 1981-2010ರ ನಡುವಿನ ಐತಿಹಾಸಿಕ ಸರಾಸರಿಗಿಂತ ಕಳೆದ ವರ್ಷ ಸಾಗರಗಳು 0.075 ಸೆಲ್ಶಿಯಸ್ ಹೆಚ್ಚು ಬಿಸಿಯಾಗಿದ್ದವು. ಕಳೆದ 25 ವರ್ಷಗಳಲ್ಲಿ ಮಾನವರು ಸಮುದ್ರಕ್ಕೆ ಹಾಕಿದ ಶಾಖದ ಪ್ರಮಾಣ ಹಿರೋಷಿಮಾ ಪರಮಾಣು ಬಾಂಬ್ನ 3.60 ಬಿಲಿಯನ್ ಸ್ಪೋಟಗಳಿಗೆ ಸಮನಾಗಿರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ. -ಪಿಟಿಐ