ಅವೈಜ್ಞಾನಿಕವಾದ ವಲಯ ಕಚೇರಿಗೆ ಆಕ್ಷೇಪ

palike
ಪಾಲಿಕೆ ದಕ್ಷಿಣ ವಲಯ ಕಚೇರಿಯ ಸ್ಥಳ ಬದಲಾವಣೆಗೆ ಒತ್ತಾಯಿಸಿ ಯಮುನಾ ರಂಗೇಗೌಡ, ಆರ್.ಸಿ.ನಾಯ್ಕ, ರಂಗೇಗೌಡ ಮುಂತಾದವರು ಡಾ.ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ನಗರ ಪಾಲಿಕೆ ವತಿಯಿಂದ ಮೂರು ವಲಯ ಕಚೇರಿಗಳಿಗೆ ಸ್ಥಳ ಗುರುತಿಸಿರುವುದು ಅವೈಜ್ಞಾನಿಕವಾಗಿದೆ. ಅದರಲ್ಲೂ ದಕ್ಷಿಣ ವಲಯ ಕಚೇರಿಯನ್ನು ಇಮಾಂ ಬಾಡಾದಲ್ಲಿ ತೆರೆಯಲು ಮುಂದಾಗಿರುವುದು ಸರಿಯಲ್ಲ. ಇದರಿಂದ ನಾಗರಿಕರಿಗೆ ತೊಂದರೆಯಾಗಲಿದೆ. ಕೂಡಲೇ ಇದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿ ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರು ನಿಯೋಗ ಮಂಗಳವಾರ ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಿತು.

ದಕ್ಷಿಣ ವಲಯದ ವ್ಯಾಪ್ತಿಗೆ ವಾರ್ಡ್ ನಂ.12ರ ಸಿದ್ದೇಶ್ವರ ನಗರ, ಚಿಕ್ಕಲ್, ಗುರುಪುರ, ಪುರಲೆ, ವೆಂಕಟೇಶ ನಗರ, ವಾರ್ಡ್ ನಂ. 17ರ ವಿದ್ಯಾನಗರ ಜ್ಯೋತಿ ರಾವ್ ಬೀದಿ, ಸುಭಾಷ್ ನಗರ, ವಾರ್ಡ್ ನಂ.15ರ ಹರಿಗೆ, ಮಲವಗೊಪ್ಪ, ವಾರ್ಡ್ ನಂ. 16ರ ಶಾಂತಿನಗರ, ಊರುಗಡೂರು, ವಿದ್ಯಾನಗರ ದಕ್ಷಿಣ ಪ್ರದೇಶಗಳನ್ನು ಸೇರಿಸಲಾಗಿದೆ. ಆದರೆ ಇಮಾಂ ಬಾಡಾದಲ್ಲಿ ವಲಯ ಕಚೇರಿ ತೆರೆದರೆ ನಾಗರಿಕರ ದೂರದಿಂದ ಇಲ್ಲಿಗೆ ಆಗಮಿಸುವುದು ಕಷ್ಟವಾಗಲಿದೆ ಎಂದು ಆಯುಕ್ತರಿಗೆ ವಿವರಿಸಲಾಯಿತು.

ದಕ್ಷಿಣ ವಲಯದ ಕಚೇರಿಯನ್ನು ಹೊಳೆ ಬಸ್ ನಿಲ್ದಾಣದ ಬಳಿ ಅಥವಾ ಪಾಲಿಕೆ ಆವರಣದಲ್ಲಿಯೇ ತೆರೆಯಬೇಕು. ಇಮಾಂ ಬಾಡಾಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಇಲ್ಲಿಗೆ ಆಟೋದಲ್ಲಿ ಆಗಮಿಸುವುದು ನಾಗರಿಕರಿಗೆ ಹೊರೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆರ್.ಸಿ.ನಾಯ್ಕ, ಪ್ರಮುಖರಾದ ರಂಗೇಗೌಡ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net