

ಜಯಪುರ: ಲಕ್ಷಾಂತರ ದೇಶ ಪ್ರೇಮಿಗಳ ಬಲಿದಾನದ ಲವಾಗಿ ಸ್ವಾತಂತ್ರ್ಯಲಭಿಸಿದೆ ಎಂದು ಹಾಡುಗಾರು(ಮೇದಕ್ಕಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸುಜಾತ ಹೇಳಿದರು.
ಹಾಡುಗಾರು ಸರ್ಕಾರಿ ಶಾಲೆಯಲ್ಲಿ ಮಂಗಳವಾರ 77ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರಾಪಿತ ಮಹಾತ್ಮಾ ಗಾಂಧಿಜೀವರ ಅಹಿಂಸಾತ್ಮಕ ಹೋರಾಟ, ಸುಭಾಷ್ ಚಂದ್ರ ಬೋಸ್ ಅವರ ಸಶಸ್ತ್ರ ಹೋರಾಟ, ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ್ ಹಾಗೂ ಚಂದ್ರಶೇಖರ್ ಅಜಾದ್ ಅವರಂತಹ ಕ್ರಾಂತಿಕಾರಿಗಳ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ ಎಂದರು.
ನಮ್ಮ ಸಂವಿಧಾನ ನಮಗೆ ಸ್ವಾತಂತ್ರ್ಯದ ಹಕ್ಕುಗಳನ್ನು ನೀಡಿದ್ದು, ಅದನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವ ಜತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ದೇಶದ ಪ್ರಜೆಗಳಾಗಿ ಮೌಲ್ಯಯುತ ಸ್ವಾತಂತ್ರ್ಯ ಉಳಿಸಿಕೊಳ್ಳೋಣ. ಆ ಮೂಲಕ ಹಿರಿಯರಿಂದ ಬಂದ ಸ್ವಾತಂತ್ರ್ಯ ಉಳಿಸಿಕೊಂಡು, ದೇಶವನ್ನು, ಅಭಿವೃದ್ಧಿ ಪತದತ್ತ ಕೊಂಡೊಯ್ಯಬೇಕಿದೆ ಎಂದರು.
ದಾನಿಗಳಾದ ಕಿಬ್ಳಿ ರಂಗಪ್ಪಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಹೆಬ್ಬಾರ್, ಹೇರೂರ ಗ್ರಾಪಂ ಸದಸ್ಯರಾದ ಅನುಪಮಾ ದಿನೇಶ್, ಸುರೇಶ್ ಚಂದ್ರಗಿರಿ ಕಲಾ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಗಿರಿ ದಿನೇಶ್, ಶಿಕ್ಷಕಿ ದೀಪ್ತಿ ಕೆ.ಎಸ್.ಗ್ರಾಮಸ್ಥರಾದ ಹೂವಪ್ಪಗೌಡ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಸಿಬ್ಬಂದಿ ಸುಮತಿ, ರೋಶಿನಿ ಇದ್ದರು.