ಹತ್ತಿರವಾಗುತ್ತಿದೆ ಚುನಾವಣಾ ಸಮಯ; ಶುರುವಾಗಿದೆ ಆಣೆ ಪ್ರಮಾಣ ಪಾಲಿಟಿಕ್ಸ್!

BJP JDS
Published on

ಬೆಂಗಳೂರು: ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ದೇವನಹಳ್ಳಿಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಆಣೆ ಪ್ರಮಾಣ ಪಾಲಿಟೆಕ್ಸ್ ಶುರುವಾಗಿದೆ.

ದೇವನಹಳ್ಳಿಯ ಜೆಡಿಎಸ್​ನ ಹಾಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಬಿಜೆಪಿಯ ಪಿಳ್ಳಮುನಿಶಾಮಪ್ಪ ನಡುವೆ ಕೆಂಪೇಗೌಡರ ಪ್ರತಿಮೆ ಉದ್ಘಾಟನೆಯ ಶಿಷ್ಟಚಾರ ಉಲ್ಲಂಘನೆ ವಿಚಾರದಲ್ಲಿ ದೊಡ್ಡ ಗಲಾಟೆಯಾಗಿದೆ.

ನಿಸರ್ಗ ನಾರಾಯಣಸ್ವಾಮಿ ಮೇಲೆ ಪಿಳ್ಳಮುನಿಶಾಮಪ್ಪ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಿಂದ ಭ್ರಷ್ಟಚಾರ ಆರೋಪ ಕೇಳಿಬಂದಿದ್ದಲ್ಲದೇ, ಬಿಜೆಪಿ ಪಕ್ಷ ಮೋದಿ ಹಾಗೂ ಜನಸ್ಪಂಧನ ಕಾರ್ಯಕ್ರಮಕ್ಕೆ ಪಿಡಿಓ ಗಳ ಬಳಿ 50 ಸಾವಿರ ಹಣ ಪಿಕ್ಸ್ ಮಾಡಿ ಹಣ ಪಿಕಿದ್ದಾರೆ ಎಂದು ಶಾಸಕರಿಂದ ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಈ ಹಿನ್ನೆಲೆ ಹಾಲಿ ಶಾಸಕರಿಗೆ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವಂತೆ ಬಿಜೆಪಿ ನಾಯಕರು ಟಾಂಗ್ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ನಾನು ಯಾವುದೇ ಭ್ರಷ್ಟಚಾರ ಮಾಡಿಲ್ಲ ನಮ್ಮ ವಂಶದಲ್ಲೇ ಮಾಡಿಲ್ಲ, ಈ ಬಗ್ಗೆ ತಗೊಂಡಿಲ್ಲ ಅಂತಾ ಮಂಜುನಾಥನ ಮೇಲೆ ಆಣೆ ಪ್ರಮಾಣಕ್ಕೂ ಸಿದ್ದ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net