ಡಿವೋರ್ಸ್‌ಗೆ ಅರ್ಜಿ ಹಾಕಿದ್ರೆ ಸರ್ಕಾರಿ ಕೆಲಸಕ್ಕೆ ತೊಂದರೆ ಆಗತ್ತಾ?

nyayadevate2
Published on
ನಾನು ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ನಮಗೆ ಇಬ್ಬರು ಮಕ್ಕಳು. ಇತ್ತೀಚೆಗೆ ಸುಮಾರು ಮೂರು ನಾಕು ವರ್ಷಗಳಿಂದ ನಮ್ಮ ಸಂಬಂಧ ಚೆನ್ನಾಗಿಲ್ಲ. ಇದಕ್ಕೆ ಕಾರಣ ನನ್ನ ಹೆಂಡತಿಯ ಹಠಮಾರಿತನ , ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವಿಲ್ಲದೇ ಇರುವುದು ಇನ್ನೂ ಏನೇನೋ. ಒಟ್ಟಿನಲ್ಲಿ ನಾವಿಬ್ಬರೂ ವಿಚ್ಛೇದನ ಪಡೆಯಬೇಕೆಂದು ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ಕೇಸು ಹಾಕಿದರೆ ನನ್ನ ಸರ್ಕಾರೀ ಕೆಲಸಕ್ಕೇನಾದರೂ ತೊಂದರೆ ಆಗುತ್ತದೆಯೇ?. ವಿಚ್ಛೇದನಕ್ಕೆ ನನ್ನ ಹೆಂಡತಿಯ ಒಪ್ಪಿಗೆಯೂ ಇದೆ. ಮಕ್ಕಳ ಗತಿ ಏನು? ಯಾವ ಕೋರ್ಟಿನಲ್ಲಿ ಕೇಸು ಹಾಕಬೇಕು? ಎಷ್ಟು ಸಮಯ ತೆಗೆದುಕೊಳ್ಳುತ್ತದೆ.?
ಉತ್ತರ:- ನೀವು ವಿಚ್ಛೇದನ ಪಡೆಯುವುದು ಬಿಡುವುದು ನಿಮ್ಮ ವಯಕ್ತಿಕ ವಿಷಯ. ಇದರಿಂದ ನಿಮ್ಮ ಕೆಲಸಕ್ಕೆ ಯಾವುದೇ ತೊಂದರೆಯೂ ಆಗುವುದಿಲ್ಲ.

ಉತ್ತರ: ನೀವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಿದರೆ ಆರು ತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ನಿಮಗೆ ವಿಚ್ಛೇದನದ ಆದೇಶ ಸಿಗುತ್ತದೆ. (ಏಳನೇ ತಿಂಗಳಲ್ಲೂ ಸಿಗಬಹುದು).

ವಿಚ್ಛೇದನದ ಪ್ರಕರಣವನ್ನು ನಿಮ್ಮ ಊರಿನಲ್ಲಿ ಕೌಟುಂಬಿಕ ನ್ಯಾಯಾಲಯ ಇದ್ದರೆ ಅಲ್ಲಿ ದಾಖಲಿಸಿ . ಇಲ್ಲದೇ ಹೋದರೆ ನಿಮ್ಮ ತಾಲ್ಲೂಕಿನ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಬಹುದು.

ಮಕ್ಕಳ ವಿಷಯವಾಗಿ ಯಾರು ಏನೆಲ್ಲ ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ನೀವಿಬ್ಬರೂ ದಂಪತಿಗಳೂ ಕೂತು ಮಾತಾಡಿ ತೀರ್ಮಾನಕ್ಕೆ ಬಂದು ಅದರ ವಿಷಯವನ್ನು ವಿಚ್ಛೇದನದ ಪ್ರಕರಣದಲ್ಲಿ ನೀವು ಸಲ್ಲಿಸಿರುವ ಅರ್ಜಿಯಲ್ಲಿ ನಮೂದಿಸಬೇಕು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net