ವಿಚ್ಛೇದನ ಪಡೆದಾಕೆಯನ್ನೇ ಪುನಃ ಮದುವೆಯಾಗಬಹುದೆ?

nyayadevate
Published on

ಪ್ರಶ್ನೆ: ನನಗೆ ಮದುವೆ ಆಗಿ ಹದಿಮೂರು ವರ್ಷ ಆಗಿತ್ತು. ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇದ್ದಾರೆ. ನನ್ನ ಹೆಂಡತಿ ನನ್ನಿಂದ ವಿಚ್ಛೇದನ ಪಡೆದು ಹೆಣ್ಣು ಮಗುವನ್ನು ಕರೆದು ಕೊಂಡು ಹೋದಳು. ಈಗ ಎರಡು ವರ್ಷಗಳಿಂದ ಮಕ್ಕಳಿಗೋಸ್ಕರ ಮತ್ತೆ ಜೊತೆಯಾಗಿರೋಣ ಎನ್ನುತ್ತಿದ್ದಾಳೆ. ಆಕೆ ಕೆಲಸದಲ್ಲಿ ಇಲ್ಲ. ನನಗೆ ನನ್ನ ಮಗಳ ಮೇಲೆ ವಿಪರೀತ ಪ್ರೀತಿ. ನಾನು ಈಗ ಕಾನೂನಿನ ತೊಡಕು ಆಗದೇ ಏನು ಮಾಡಬಹುದು ಎಂದು ತಿಳಿಸಿ?

ಉತ್ತರ:ನೀವಿಬ್ಬರೂ ಮತ್ತೆ ಮರುಮದುವೆ ಆಗಬಹುದು. ಹಾಗೆ ಮರುಮದುವೆ ಆಗುವುದಕ್ಕೆ ಕಾನೂನಿನಲ್ಲಿ ಅಡಚಣೆ ಇಲ್ಲ. ಒಮ್ಮೆ ವಿಚ್ಛೇದನ ಮಾಡಿಕೊಂಡ ದಂಪತಿಗಳೇ ಮತ್ತೆ ಮರುಮದುವೆ ಆಗಬಹುದು. ಆ ವಿವಾಹವನ್ನು ನೋಂದಣಿ ಮಾಡಿಸಿ.

ವಿವಾಹಕ್ಕೆ ಮುಂಚೆ ವಿವಾಹ ಪೂರ್ವ ಸಮಾಲೋಚನೆಗೆ ( ಪ್ರೀ ಮರಿಟಲ್ ಕೌನ್ಸೆಲಿಂಗ್) ಇಬ್ಬರೂ ಹೋಗಿ. ಯಾವ ಕಾರಣದಿಂದ ನೀವಿಬ್ಬರೂ ವಿಚ್ಛೇದನ ಪಡೆದಿದ್ದಿರೋ ಅದೇ ವಿಷಯಕ್ಕೆ ಮತ್ತೆ ಜಗಳ ಪ್ರಾರಂಭ ಆಗಬಾರದು . ಕೇವಲ ಮಗಳ ಮೇಲೆ ಇಷ್ಟ ಎಂದು ಮದುವೆ ಆಗುವುದಕ್ಕಿಂತ ನಿಮ್ಮಿಬ್ಬರಲ್ಲಿ ಸಾಮರಸ್ಯ ಇರಬಹುದೇ ಎನ್ನುವುದರ ಬಗ್ಗೆಯೂ ಆಲೋಚಿಸಿ. ದಿನ ನಿತ್ಯ ಮಕ್ಕಳ ಮುಂದೆ ಜಗಳ ಆಡಿ ಮಕ್ಕಳ ಮನಸ್ಸಿಗೂ ನೋವಾಗದಂತಹ ವ್ಯವಸ್ಥೆಯ ಆಯ್ಕೆ ಮಾಡಿಕೊಳ್ಳಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ: ಐದು ಸೂತ್ರಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net