ಪ್ರಬಲ ಭೂಕಂಪದ ನಡುವೆಯೇ ನವಜಾತ ಶಿಶುಗಳನ್ನು ರಕ್ಷಿಸಿದ ದಾದಿಯರು| assam

Untitled design
Published on

ಅಸ್ಸಾಂ; ನಿನ್ನೆ (ಸೆ.14) ಸಂಜೆ ಅಸ್ಸಾಂನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.9 ರಷ್ಟಿದ್ದು, ಉದಲ್ಗುರಿಯಿಂದ ಪೂರ್ವಕ್ಕೆ 14 ಕಿ.ಮೀ ದೂರದಲ್ಲಿ ಕೇಂದ್ರಬಿಂದುವಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿತ್ತು.

ಈ ಸಂದರ್ಭದಲ್ಲಿ ನಾಗಾಂವ್ ಪ್ರದೇಶದಲ್ಲಿದ್ದ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಾದಿಯರು ಭೂಕಂಪಕ್ಕೂ ಕೂಡ ಭಯಪಡದೆ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಶಿಶುಗಳ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಈ ದೃಶ್ಯ ಅಲ್ಲೇ ಇದ್ದಂತಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಾದಿಯರು ಕೆಲಸ ನಿರ್ವಹಿಸುತ್ತಿದ್ದಾಗ ಭೂಕಂಪ ಸಂಭವಿಸುತ್ತದೆ. ತಕ್ಷಣ ಇದನ್ನರಿತ ನರ್ಸ್ ಶಿಶುಗಳ ರಕ್ಷಣೆಗೆ ಮುಂದಾಗಿರುವುದನ್ನು ಕಾಣಬಹುದಾಗಿದೆ.

(ಏಜೆನ್ಸೀಸ್)

ಭೂಕಂಪದ ಕೇಂದ್ರಬಿಂದು ಗುವಾಹಟಿಯಿಂದ 89 ಕಿಲೋಮೀಟರ್ ಮತ್ತು ಸೋನಿತ್‌ಪುರ ಜಿಲ್ಲೆಯ ಧೇಕಿಯಾಜುಲಿ ಪಟ್ಟಣದಿಂದ 16 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿತ್ತು. ಗೋಹ್ಪುರ್ ಮತ್ತು ಧೇಕಿಯಾಜುಲಿಯಲ್ಲಿ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮನೆಯ ಮೇಲ್ಛಾವಣಿ ಕುಸಿದಿದೆ. ಹಾಗೂ ನಲ್ಬರಿ ಜಿಲ್ಲೆಯಲ್ಲಿ ಮನೆಯ ನೆಲದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net