7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

Nurse who end life 7 newbor Babies Was the illicit relationship with the doctor the reason for the murder
Published on

- ಮಕ್ಕಳನ್ನು ಕೊಂದು, ಪೋಷಕರ ನೋವನ್ನು ನೋಡಿ ಆನಂದಿಸುತ್ತಿದ್ದ ನರ್ಸ್

- ಹತ್ಯೆಗಳ ಸುಳಿವು ನೀಡಿದ್ದ ಭಾರತ ಮೂಲದ ವೈದ್ಯ

- ವೈದ್ಯ ಗಮನ ಸೆಳೆಯಲು ಕ್ರೂರ ಕೃತ್ಯ

ಲಂಡನ್‌: ಬ್ರಿಟನ್ನಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ​ಒಬ್ಬಳು ಅಕ್ರಮ ಸಂಬಂಧ, ವಿಕೃತ ಸಂತೋಷಕ್ಕಾಗಿ ಏಳು ನವಜಾತ ಶಿಶುಗಳನ್ನು ಕೊಂದು, ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ನರ್ಸ್​​ಗೆ ಕೋರ್ಟ್​​​ ಶಿಕ್ಷೆ ಪ್ರಕಟಿಸಿದೆ.

ಬ್ರಿಟನ್‌ನ ಆಸ್ಪತ್ರೆಯೊಂದರ ನವಜಾತ ಶಿಶು ಘಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳು ಮಕ್ಕಳನ್ನು ಕೊಂದಿದ್ದಲ್ಲದೆ, ಇನ್ನೂ ಆರು ಮಕ್ಕಳ ಕೊಲೆಗೆ ಪ್ರಯತ್ನ ನಡೆಸಿದ್ದ ಪ್ರಕರಣದಲ್ಲಿ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ಕೋರ್ಟ್ ಪ್ರಕಟಿಸಿದೆ.

ನಡೆದಿದ್ದೇನು?: 2015 ಹಾಗೂ 2016ರ ನಡುವೆ ಇಂಗ್ಲೆಂಡ್‌ನ ಕೌಂಟೆಸ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸರಣಿ ಸಾವು ಸಂಭವಿಸಿತ್ತು. ಈ ಸಂಬಂಧ 2018ರಲ್ಲಿ ಲೂಸಿ ವಿರುದ್ಧ ದೂರು ದಾಖಲಾಗಿತ್ತು.

ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿರುವ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದಾಗ ಅಲ್ಲಿನ ಮಕ್ಕಳ ವೈದ್ಯರಲ್ಲಿ ಒಬ್ಬರಾದ ಭಾರತೀಯ ಮೂಲದ ಡಾ.ರವಿ ಜಯರಾಮ್‌ ಎಂಬುವರು ಲೂಸಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸ್‌ ತನಿಖೆಯಲ್ಲೂ ಆಕೆಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಡಾ.ರವಿ ಅವರ ಹೇಳಿಕೆಯನ್ನು ಆಕ್ಷೇಪಿಸಿ, ‘ಕಿಲ್ಲರ್‌ ನರ್ಸ್‌’ ಬಳಿಯೇ ಕ್ಷಮೆ ಕೇಳುವಂತೆ ಅವರಿಗೆ ಸೂಚಿಸಿತ್ತು.

Why Did Lucy Letby A UK Nurse Murder Babies Investigators List Motives

ಆದರೆ ನವಜಾತ ಶಿಶುಗಳ ಸಾವಿನ ಪ್ರರಣದ ಬೆನ್ನು ಹತ್ತಿದ್ದ ಪೊಲೀಸರ ಬಲೆಗೆ ಬಿದ್ದವಳೆ ಬ್ರಿಟನ್‌ನ ಚೆಸ್ಟರ್ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ ಎಂಬಾಕೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ನರ್ಸ್‌ ಮನೆಯಲ್ಲಿ ಆಕೆ ಬರೆದಿಟ್ಟಿದ್ದ ನೋಟ್‌ಗಳು ಪತ್ತೆಯಾಗಿದ್ದವು. ಈ ಮೂಲವನ್ನಿಟ್ಟುಕೊಂಡು ತನಿಖೆ ಕೈಗೊಂಡರು.

ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ನಡೆಸಿ ಕೋರ್ಟ್​​ ಲೂಶಿಯಾ ದೋಷಿ ಎಂದು ತೀರ್ಪು ನೀಡಿದೆ. ಆದರೆ ತನಿಖೆಯಲ್ಲಿ ಹಾಗೂ ಕೋರ್ಚ್‌ನಲ್ಲಿ ಆಕೆ ತಾನು ಯಾರನ್ನೂ ಕೊಂದಿಲ್ಲ ಎಂದೇ ವಾದಿಸಿದ್ದಳು. ಹೀಗಾಗಿ ಸರಣಿ ಶಿಶುಗಳ ಹತ್ಯೆಯ ಕಾರಣ ಇನ್ನೂ ನಿಗೂಢವಾಗಿದೆ. ಆದರೆ ಮೃತ ಶಿಶುಗಳ ಪೋಷಕರು ಹಾಗೂ ವಕೀಲರು ಆಕೆಯ ಕ್ರೂರ ಕೃತ್ಯದ ಕುರಿತಾಗಿ ಕೆಲವು ಕೆಲವು ಮಾಹಿತಿಯನ್ನು ನೀಡಿದ್ದಾರೆ.

ನವಜಾತ ಶಿಶುಗಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ಚುಚ್ಚಿ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿ ಅಥವಾ ಹೊಟ್ಟೆಗೆ ನ್ಯಾಸೋಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಹಾಲು ಅಥವಾ ಗಾಳಿಯನ್ನು ತುಂಬಿ ಲೂಸಿ ಕ್ರೂರವಾಗಿ ಕೊಲ್ಲುತ್ತಿದ್ದಳು. ತಾನು ನರ್ಸ್‌ ಆಗಿದ್ದ ಆಸ್ಪತ್ರೆಯಲ್ಲಿ ಲೂಸಿ ಐದು ಗಂಡು ಶಿಶು, ಎರಡು ಹೆಣ್ಣು ಶಿಶುಗಳನ್ನು ಕೊಂದಿದ್ದಾಳೆ. ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ್ದಾಳೆ.

ಮಕ್ಕಳನ್ನು ಕ್ರೂರವಾಗಿ ಕೊಲ್ಲುತ್ತಿದ್ದಳು:

ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?: ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಲೂಸಿ ಅಕ್ರಮ ಸಂಬಂಧ ಹೊಂದಿದ್ದಳು, ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆಸುತ್ತಿದ್ದರಂತೆ. ಶಿಶುವಿಗೆ ಆರೋಗ್ಯ ಸಮಸ್ಯೆಯಾದಾಗ ಆ ವೈದ್ಯರನ್ನು ಆಕೆಯನ್ನು ಕರೆಯಬೇಕಿತ್ತು. ಆಗ ವೈದ್ಯನ ಗಮನ ಸೆಳೆಯುವುದಕ್ಕಾಗಿ ಶಿಶುಗಳನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ನರ್ಸ್ ವಿವಾಹಿತ ವೈದ್ಯನನ್ನ ನೋಡುವ ಸಲುವಾಗಿ ಈ ರೀತಿ ಕೃತ್ಯ ಎಸಗಿದ್ದಾಳೆ ಎಂದು ಆರೋಪ ಮಾಡಲಾಗಿದೆ.

ಶಿಶು ಸಾವನ್ನಪ್ಪಿದ ಬಳಿಕ ವಾರ್ಡ್‌ನಲ್ಲಿ ಪೋಷಕರು ಅಳುವುದನ್ನು ನೋಡಿ ಲೂಸಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು. ಶಿಶುಗಳಿಗೆ ಇಂಜೆಕ್ಷನ್‌ ಚುಚ್ಚಿದ ಬೇರೆ ನರ್ಸ್‌ಗಳನ್ನು ಕರೆದುಕೊಂಡು ಬಂದು ‘ಈ ಮಗು ಸಾಯುತ್ತದೆ’ ಎಂದು ಹೇಳುವ ಮೂಲಕ ತನಗೆ ಎಲ್ಲವೂ ಮೊದಲೇ ತಿಳಿಯುತ್ತದೆ ಎಂದು ಆಕೆಗೆ ಬಿಂಬಿಸುತ್ತಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net