ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಗೆ ಎನ್‌ಎಸ್‌ಎಸ್ ಸಹಕಾರಿ

02BTP01
ಬೆಟ್ಟದತುಂಗ ಗ್ರಾಮದಲ್ಲಿ ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಶತಾಯುಷಿ ಅಪ್ಪಾಜಿಗೌಡ(107)ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಲಕ್ಷ್ಮೀ ಕುಂಜಪ್ಪ ಕಾರ್ನಾಡ್, ಕೃಷ್ಣಗೌಡ, ಜ್ಯೋತಿಪ್ರಸಾದ್, ಶಿವಣ್ಣ, ಲೋಕೇಶ್ ಇದ್ದರು.
Published on

ಬೆಟ್ಟದಪುರ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಸಹಕಾರಿ ಎಂದು ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೀತಿ ಅರಸ್ ಹೇಳಿದರು.

  • ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ಬೆಟ್ಟದತುಂಗ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದಂತಹ ಮಕ್ಕಳು ತಮ್ಮ ಜೀವನದಲ್ಲಿ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ನಮ್ಮ ಗ್ರಾಮದಲ್ಲಿ ವಾರಗಳ ಕಾಲ ಇದ್ದು, ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿರುವ ಶಿಬಿರಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
  • ಸಮಾರಂಭದಲ್ಲಿ ಗ್ರಾಮದ ಶತಾಯುಷಿ ಅಪ್ಪಾಜಿಗೌಡ(107)ಅವರನ್ನು ಸನ್ಮಾನಿಸಲಾಯಿತು. ಸಿಡಿಸಿ ಉಪಾಧ್ಯಕ್ಷ ಕುಂಜಪ್ಪ ಕಾರ್ನಾಡ್, ಮೈಸೂರಿನ ಕುವೆಂಪು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಲ್. ಚಿದಾನಂದಕುಮಾರ್, ಪ್ರಾಂಶುಪಾಲೆ ಜ್ಯೋತಿಪ್ರಸಾದ್, ಪಿಡಿಒ ಚೇತನ್‌ಕುಮಾರ್, ಗ್ರಾ.ಪಂ ಉಪಾಧ್ಯಕ್ಷ ಶಿವಣ್ಣ, ಗ್ರಾ.ಪಂ ಸದಸ್ಯ ಲೋಕೇಶ್, ಮುಖಂಡರಾದ ಯಶೋಧರಾ, ತಿಪ್ಪೇಸ್ವಾಮಿ, ನಾಗೇಶ್, ನಟರಾಜು, ಕೃಷ್ಣೇಗೌಡ, ಪ್ರಸನ್ನ, ಬಿ.ಟಿ.ಸಣ್ಣಸ್ವಾಮಿಗೌಡ, ರಜನಿಕಾಂತ್, ದಿಲೀಪ್‌ಕುಮಾರ್, ವೆಂಕಟೇಶ್, ಮನು, ಕುಮಾರಸ್ವಾಮಿ, ರಕ್ಷಿತ್, ರವಿ, ಉಪನ್ಯಾಸಕರಾದ ರಾಜು, ರಮೇಶ್, ಮಹಮ್ಮದ್ ಖಾದರ್, ಹೇಮಚೈತ್ರಾ, ವಸಂತ್ ಅಭಿಜಿತ್, ರವಿ, ಸೌಮ್ಯಾ, ಮುಖ್ಯಶಿಕ್ಷಕ ಸಿಂಗ್ರಿ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net