ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಅಭಿನಂದನೆ

13 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಸತತ ಪ್ರಯತ್ನದ ಫಲವಾಗಿ ಆಸ್ಟೆçÃಲಿಯಾದ ಸರ್ಕಾರದ ಸುಪರ್ದಿಯಲ್ಲಿದ್ದ ಅನಿವಾಸಿ ಭಾರತೀಯ ಮಕ್ಕಳಿಬ್ಬರು ಅಜ್ಜ- ಅಜ್ಜಿಯ ಮಡಿಲು ಸೇರಿದ್ದಾರೆ. ಲಿಂಗರಾಜ ಪಾಟೀಲ, ಅವರ ಮಕ್ಕಳಾದ ಅಮರ್ತ್ಯ ಮತ್ತು ಅಪರಾಜಿತ ಧಾರವಾಡಕ್ಕೆ ಆಗಮಿಸಿದ್ದಾರೆ. ಆಸ್ಟೆçÃಲಿಯಾ ಸರ್ಕಾರದ ಸುಪರ್ದಿಯಿಂದ ಮಕ್ಕಳನ್ನು ಬಿಡಿಸಿ ಭಾರತಕ್ಕೆ ಮರಳಲು ನೆರವಾದ ಸಚಿವ ಪ್ರಲ್ಹಾದ ಜೋಶಿ ಅವರನ್ನು ಹುಬ್ಬಳ್ಳಿಯಲ್ಲಿ ಶನಿವಾರ ಭೇಟಿ ಮಾಡಿದ ಪ್ರೊ. ಎಸ್.ಎಸ್. ದೇಸಾಯಿ ಕುಟುಂಬ ಅಭಿನಂದನೆ ಸಲ್ಲಿಸಿತು.
ನಗರದ ಸಪ್ತಾಪುರ ನಿವಾಸಿ ಪ್ರೊ. ಎಸ್.ಎಸ್. ದೇಸಾಯಿ ಅವರ ಪುತ್ರಿ ಪ್ರಿಯದರ್ಶಿನಿ ಹಾಗೂ ಲಿಂಗರಾಜ ಪಾಟೀಲ ಆಸ್ಟೆçÃಲಿಯಾದಲ್ಲಿ ನೆಲೆಸಿದ್ದರು. ಅಲ್ಲಿನ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದು, ಸರ್ಕಾರ ಮಕ್ಕಳಿಬ್ಬರನ್ನು ವಶಕ್ಕೆ ಪಡೆದು ಪೋಷಣೆ ಮಾಡುತ್ತಿತ್ತು. ಆಸ್ಟೆçÃಲಿಯಾದ ಕಠಿಣ ಕಾನೂನಿನ ವಿರುದ್ಧ ಹೋರಾಡಿ ಬೇಸತ್ತಿದ್ದ ಪ್ರಿಯದರ್ಶಿನಿ, 2023ರ ಆಗಸ್ಟ್ 20ರಂದು ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೇAದ್ರ ಸಚಿವ ಪ್ರಲ್ಹಾದ ಜೋಶಿ ಪ್ರೊ. ದೇಸಾಯಿ ಅವರನ್ನು ಭೇಟಿ ಮಾಡಿ ಮೊಮ್ಮಕ್ಕಳನ್ನು ಆಸ್ಟೇçಲಿಯÁದಿಂದ ಭಾರತಕ್ಕೆ ಕರೆತರುವ ಭರವಸೆ ನೀಡಿದ್ದರು. ವಿದೇಶಾಂಗ ಸಚಿವರ ಮೂಲಕ ಆಸ್ಟೆçÃಲಿಯÁ ಸರ್ಕಾರದೊಂದಿಗೆ ಮÁತುಕತೆ ನಡೆಸಿದ್ದರು.
ಅವರ ನಿರಂತರ ಪ್ರಯತ್ನದ -Àಲವಾಗಿ ಆಸ್ಟೆçÃಲಿಯಾ ಸರ್ಕಾರ ಮಕ್ಕಳನ್ನು ಇತ್ತೀಚೆಗೆ ತಂದೆಯ ಸುಪರ್ದಿಗೆ ನೀಡಿತ್ತು. ಇದೀಗ ತವರಿಗೆ ಆಗಮಿಸಿರುವ ಪಾಟೀಲ ಕುಟುಂಬ ಕೇಂದ್ರ ಸಚಿವ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net