

ನಾಪೋಕ್ಲು: ವಾಹನಕ್ಕೆ ಸೈಡ್ ಕೊಡುವ ಸಂದರ್ಭ ರಸ್ತೆ ಅಂಚಿಗೆ ಸರಿದ ಲಾರಿಯೊಂದು ಅಪಾಯದಿಂದ ಪಾರಾದ ಪ್ರಸಂಗ ಮಡಿಕೇರಿಯ ಕೂಟು ಹೊಳೆ ರಸ್ತೆ ಭಗವತಿ ನಗರದಲ್ಲಿ ನಡೆದಿದೆ. ಕುಶಾಲನಗರದಿಂದ ಗಲ್ಲಿ ಸಾಗಾಟ ಮಾಡುತ್ತಿದ್ದ ಲಾರಿಯು ಸೋಮವಾರ ಗಾಳಿಬೀಡು, ಕೂಟು ಹೊಳೆ ಕಡೆಗೆ ಸಂಚರಿಸುತ್ತಿತ್ತು. ಈ ಸಂದರ್ಭ ಮಡಿಕೇರಿ ಎಫ್‌ಎಂಸಿ ಕಾಲೇಜು ಸಮೀಪ ಭಗವತಿ ನಗರದ (ಜಂಕ್ಷನ್) ರಸ್ತೆಯಲ್ಲಿ ಎದುರುಗಡೆಯಿಂದ ಬಂದ ವಾಹನಕ್ಕೆ ಸೈಡ್ ಕೊಡುವ ಸಂದರ್ಭ ರಸ್ತೆ ಅಂಚಿಗೆ ಸರಿಯಿತು. ಮಳೆ ಮತ್ತು ಕೆಸರಿನ ಪರಿಣಾಮ ವಾಲಿ ನಿಂತಿದ್ದ ಲಾರಿ ಸ್ವಲ್ಪದರಲ್ಲೇ ಗುಂಡಿಗೆ ಉರುಳುವ ಪ್ರಮೇಯದಿಂದ ಪಾರಾಗಿದೆ. ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.