ಈಗ ದೇಶದ ಅಭಿವೃದ್ಧಿಗೆ ಯಾವುದೇ ವಿಘ್ನವಿಲ್ಲ: ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಗಣಪತಿಯನ್ನು ಸ್ಮರಿಸಿದ ಮೋದಿ

Modi (22)
ಅಧಿವೇಶನ ಆರಂಭಕ್ಕೂ ಮುನ್ನ ಗಣಪತಿಯನ್ನು ಸ್ಮರಿಸಿ ಮಾತನಾಡಿದ ಮೋದಿ.
Published on

ನವದೆಹಲಿ: ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಇಂದು ಆರಂಭವಾಗುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ, ಚತುರ್ಥಿಯ ಹಿನ್ನೆಲೆಯಲ್ಲಿ ಗಣಪತಿಯನ್ನು ಸ್ಮರಿಸಿದ್ದಾರೆ. ಮಾತ್ರವಲ್ಲ, ಈಗ ದೇಶದ ಅಭಿವೃದ್ಧಿಗೆ ಯಾವುದೇ ವಿಘ್ನವಿಲ್ಲ ಎಂದೂ ಹೇಳಿದ್ದಾರೆ.

ನಾಳೆ ನಾವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದೇವೆ ಎಂದ ಪ್ರಧಾನಿ ಮೋದಿ, ದೇವರು ಗಣೇಶ ವಿಘ್ನನಿವಾರಕ ಎಂದೇ ಪ್ರಸಿದ್ಧಿ ಪಡೆದಿದ್ದಾನೆ. ಈಗ ದೇಶದ ಅಭಿವೃದ್ಧಿಗೂ ಯಾವುದೇ ವಿಘ್ನವಿಲ್ಲ. ಭಾರತವೂ ಯಾವುದೇ ವಿಘ್ನವಿಲ್ಲದೆ ಎಲ್ಲ ಸಂಕಲ್ಪ-ಕನಸುಗಳನ್ನು ಪೂರ್ಣಗೊಳಿಸಲಿದೆ ಎಂದು ಮೋದಿ ಹೇಳಿದರು.

ಈ ಅಧಿವೇಶನ ಸಣ್ಣ ಅವಧಿಯದ್ದಾದರೂ ಐತಿಹಾಸಿಕವಾಗಿ ಮಹತ್ವದ್ದು ಎಂದ ಮೋದಿ, ಸಂಸದರಿಂದ ಈ ಅಧಿವೇಶನದಲ್ಲಿ ಏನನ್ನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನೂ ಹೇಳಿದರು. ಇದು ಕಿರು ಅಧಿವೇಶನ, ಹೀಗಾಗಿ ಸಂಸದರು ತಮ್ಮ ಸಮಯವನ್ನು ಉಲ್ಲಾಸ ಹಾಗೂ ಉತ್ಸಾಹದಿಂದ ಸಂಪೂರ್ಣವಾಗಿ ಇದರಲ್ಲಿ ಸದ್ಬಳಕೆ ಮಾಡಬೇಕು ಎಂದರು.

75 ವರ್ಷಗಳ ಪ್ರಯಾಣ ಹೊಸ ಸಂಸತ್ ಭವನದಿಂದ ಆರಂಭವಾಗುತ್ತಿರುವುದು ಈ ಸಲದ ವಿಶೇಷ. ಇದು ಐತಿಹಾಸಿಕವಾಗಿ ಮಹತ್ವಪೂರ್ಣವಾದುದು. ಈ ಹೊಸ ಪ್ರಯಾಣದೊಂದಿಗೆ ನಾವು 2047 ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ಗುರಿಯೊಂದಿಗೆ ಮುನ್ನಡೆಯೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net