ಮೇರಿ ಮಾತೆ ದೇವಾಲಯದಲ್ಲಿ ನೋವೆನ ಪ್ರಾರ್ಥನೆ

ಮೇರಿ ಮಾತೆ ದೇವಾಲಯದಲ್ಲಿ ನೋವೆನ ಪ್ರಾರ್ಥನೆ
Published on

ನಾಪೋಕ್ಲು: ಇಲ್ಲಿಯ ಮೇರಿ ಮಾತೆ ದೇವಾಲಯದಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಭಕ್ತಿ ಭಾವದಿಂದ ಭಾನುವಾರ ಆಚರಿಸಲಾಯಿತು.

ಹಬ್ಬದ ಸಲುವಾಗಿ ದೇವಾಲಯದ ಆವರಣದಲ್ಲಿ ಮೇರಿಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವ ದಿನದ ನೋವೆನ ಪ್ರಾರ್ಥನೆ ನೆರವೇರಿಸಿ ಹಾಡಿನೊಂದಿಗೆ ಸಮುದಾಯ ಬಾಂಧವರು ಪುಷ್ಪಾರ್ಚನೆ ನೆರವೇರಿಸಿದರು.

ಧರ್ಮ ಗುರು ಜ್ಞಾನ್ ಪ್ರಕಾಶ್ ಮಾತನಾಡಿ, ನಮ್ಮ ಬದುಕುವನ್ನು ಪರಿಪೂರ್ಣತೆಯಲ್ಲಿ ರೂಪಿಸಿಕೊಳ್ಳಬೇಕು. ಕ್ರಿಸ್ತನ ಹಿಂಬಾಲಕರಾದ ನಮಗೆ ಒಂದು ಗುರಿ ಇರಬೇಕು. ಪ್ರಾರ್ಥನೆ, ದಾನ, ಧರ್ಮ ಬೇರೆಯವರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಸಂತರ ಪುಸ್ತಕಗಳನ್ನು ಓದಿ ಅವರ ಪ್ರೇರಣೆ ಪಡೆದು ಬದುಕಬೇಕು ಎಂದು ಹೇಳಿದರು.

ಈ ಸಂದರ್ಭ ಕ್ರೈಸ್ತ ಭಕ್ತರು, ಪಾಲನಾ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net