

ಬೆಂಗಳೂರು: ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಹಾಗೂ ಗ್ರೇಡ್ 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ಸರ್ಕಾರ ಅಂತಿಮ ಅಧಿಸೂಚನೆ(Govt final notification for transfer) ಹೊರಡಿಸಿದೆ.
ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಸಂಬಂಧ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈಗ ಅಂತಿಮ ಅಧಿಸೂಚನೆ ಹೊರಡಿಸಿ ಶೇ.15 ರಷ್ಟು ವರ್ಗಾವಣೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಡ್ಡಾಯ ಮತ್ತು ಸಾರ್ವಜನಿಕ ಹಿತಾಸಕ್ತಿ, ಸಾಮಾನ್ಯ ಕೋರಿಕೆ ವರ್ಗಾವಣೆ ಶೇ.9, ಪತಿ-ಪತ್ನಿ ಶೇ.3, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಒಂಟಿ ಮಹಿಳೆ ಅಥವಾ ಒಂಟಿ ಪೋಷಕರ ಪ್ರಕರಣಗಳು ಅಥವಾ ದೈಹಿಕವಾಗಿ ಅವಲಂಬಿತ ಪತಿ/ಪತ್ನಿ ಹೊಂದಿರುವ ನೌಕರರು, ಅಂಗವಿಕಲತೆಯ ಮಾನದಂಡ ಮಟ್ಟವುಳ್ಳವರು, ಗಂಭೀರ ಕಾಯಿಲೆಯಿರುವ ಮಕ್ಕಳನ್ನು ಹೊಂದಿರುವ ನೌಕರರಿಗೆ ಶೇ.1, ಗಂಭೀರ ಅನಾರೋಗ್ಯದ ಪ್ರಕರಣ ಶೇ.1, ಅಂಗವಿಕಲತೆಯ ಮಾನದಂಡದ ಮಟ್ಟವುಳ್ಳ ನೌಕರರ ಪ್ರಕರಣ ಶೇ.1 ಸೇರಿದಂತೆ ಒಟ್ಟು ಶೇ.15 ರಷ್ಟು ವರ್ಗಾವಣೆ ಪರಿಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.