

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸಾವಿನ ಕುರಿತು ವಿಸ್ತ್ಕೃತ ವರದಿ ತಯಾರಿಸಿ ಸಲ್ಲಿಸುವಂತೆ(Notice to submit detailed report on Maternal death) ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸೂಚಿಸಿದರು.
ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ(Nagalakshmi Choudhari) ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಆಗಿರುವ ಬಾಣಂತಿಯರ ಸಾವು ಹಾಗೂ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಚರ್ಚೆ ಸಂದರ್ಭದಲ್ಲಿ ಈ ಸೂಚನೆ ನೀಡಿದರು.
ಆಯೋಗದ ಅಧ್ಯಕ್ಷರಾಗಿ 8 ತಿಂಗಳಲ್ಲಿ 16 ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಅಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಗಳನ್ನು ಹಾಗೂ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಅಲ್ಲದೆ 22 ಅಂಶಗಳುಳ್ಳ ಶಿಾರಸನ್ನು ಕೂಡ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
1. ಮೊದಲನೇ ಹಂತದಲ್ಲಿ ಸ್ಕ್ಯಾನಿಂಗ್, ಫೋಲಿಕ್ ಆಸಿಡ್ ಮಾತ್ರೆ ಹಾಗೂ ಊಟದ ಬಗ್ಗೆ
ಗರ್ಭಿಣಿಯರಿಗೆ ಸರಿಯಾದ ಮಾಹಿತಿಗಳನ್ನು ನೀಡಬೇಕು. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ
ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಬೇಕು.
2. ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಥೈರಾಯ್ಡ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಬೇಕು.ಎಲ್ಲ
ಆಸ್ಪತ್ರೆಗಳಲ್ಲಿ ಲ್ಯಾಬ್‌ಗಳನ್ನು ತೆರೆಯಬೇಕು.
3.ರಕ್ತ ಪರೀಕ್ಷೆಯಲ್ಲಿ ಎಚ್‌ಬಿ ಪ್ರಮಾಣ, ಥೈರಾಯ್ಡ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು
ಮಾಡಬೇಕು.
4.ಗರ್ಭಿಣಿ ಸ್ತ್ರೀಯರಿಗೆ ಸರ್ಕಾರದಿಂದ ಮೊಟ್ಟೆ ಮುಂತಾದ ಪೌಷ್ಠಿಕ ಆಹಾರವನ್ನು ಸರಿಯಾಗಿ ವಿತರಿಸಬೇಕು.
5.ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಕೊಠಡಿಗಳು, ಐಸಿಯು,
ವೆಂಟಿಲೇಟರ್ ಇರುವಂತೆ ನೋಡಿಕೊಳ್ಳಬೇಕು.
6.ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಸ್ಕ್ಯಾನಿಂಗ್ ತಜ್ಞರು, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್
ಸಿಬ್ಬಂದಿಯನ್ನು ರೋಗಿಗಳಿಗನುಸಾರವಾಗಿ ನೇಮಕ ಮಾಡಬೇಕು.
7. ಸರ್ಕಾರಿ ಆಸತ್ರೆಗಳಲ್ಲಿ ಆಪರೇಷನ್ ಥಿಯೇಟರ್. ಐಸಿಯು, ವಾರ್ಡ್ ಮುಂತಾದವುಗಳ ಶುಚಿತ್ವ
ಕಾಪಾಡಬೇಕು.
8. ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆಗಳನ್ನು ಮಾಡುವಾಗ ಉಪಕರಣಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣ ಬಳಸಬೇಕು.
9.ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಬಿಸಿ ನೀರು ಮತ್ತು ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು.
10. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅವಶ್ಯವಿರುವ ಆಂಬ್ಯುಲೆನ್ಸ್ ಒದಗಿಸಬೇಕು.
11. ಗ್ರಾಮೀಣ ಮಟ್ಟದಲ್ಲಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಮೂಡಿಸಬೇಕು.
12. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಸ್ವಚ್ಚತೆ ಕಡೆಗೆ ಗಮನ ಹರಿಸಬೇಕು.
13. ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ವಹಿಸಬೇಕು.
14. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಗಮನಹರಿಸಬೇಕು.
15. ಚಿಕಿತ್ಸೆಗೆ ಬರುವ ಮಹಿಳೆಯರನ್ನು ತಪಾಸಣೆ ಮಾಡಲು ಕೈಗವಸು, ಸ್ಕಾನಿಟೈಸರ್‌ಗಳನ್ನು
ನೀಡಬೇಕು.
16. ಔಷಧ ಗುಣಮಟ್ಟಗಳನ್ನು ಆಗಾಗ ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಬೇಕು.
17. ಕೇಂದ್ರ ಸರ್ಕಾರದಿಂದ ಪೂರೈಸಿದ ಔಷಧಗಳ ಅವಧಿ ಪರಿಶೀಲಿಸಬೇಕು.
18. ಆಸ್ಪತ್ರೆಗಳಲ್ಲಿ ಔಷಧಗಳನ್ನು ಇಡಲು ಸುವ್ಯವಸ್ಥಿತವಾದ ಸ್ಟೋರೇಜ್ ಕ್ಯಾಬಿನ್ ವ್ಯವಸ್ಥೆ ಮಾಡಬೇಕು.
19. ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವುಗಳು ಸಂಭವಿಸುತ್ತಿದ್ದಲ್ಲಿ ರಾಜ್ಯ ಮಟ್ಟದ ನುರಿತ ತಜ್ಞ ವೈದ್ಯರ ತಂಡವನ್ನು ರಚಿಸಿ ಅವರ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
20. ಆಸ್ಪತ್ರೆಗೆ ದಾಖಲಾದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಹಿಳಾ ರೋಗಿಗಳ ಕಡೆಯ
ಪರಿಚಾರಕರಿಗೆ ಮಲಗಲು, ಶುಚಿಗೊಳ್ಳಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಒದಗಿಸಬೇಕು.
21. ಹೆಣ್ಣು ಗರ್ಭ ಧರಿಸಿದಂದಿನಿಂದ ಸುಸೂತ್ರವಾಗಿ ಹೆರಿಗೆ ಆಗುವವರೆಗೆ ಇರುವ ಸೂಕ್ತ ರೀತಿಯ
ವೈದ್ಯಕೀಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲು ಕ್ರಮ ಕೈಗೊಳ್ಳಬೇಕು.
22. ರಾಜ್ಯದಲ್ಲಿ ಸದ್ಯ ಮೃತಪಟ್ಟಿರುವ ಬಾಣಂತಿಯರ ಮಕ್ಕಳಿಗೆ ಅವರ ಉನ್ನತ ವಿದ್ಯಾಭ್ಯಾಸದವರೆಗೆ ಉಚಿತ ಶಿಕ್ಷಣ ನೀಡಬೇಕು.