ಆಹಾರದಲ್ಲಿ ಕೃತಕ ಬಣ್ಣ ಬಳಸದಂತೆ ಸೂಚನೆ

ಬನ್ನೂರಿನಲ್ಲಿ ತಾಲೂಕು ಆಹಾರ ಸಂರಕ್ಷಣಾಧಿಕಾರಿ ಸುಮಂತ್ ಶನಿವಾರ ಸಂಜೆ ಬಿದಿಬದಿ ಆಹಾರ ಅಂಗಡಿಗಳಿಗೆ ಭೇಟಿ ನೀಡಿ ಮಾದರಿ ಪರಿಶೀಲಿಸಿದರು.
ಬನ್ನೂರಿನಲ್ಲಿ ತಾಲೂಕು ಆಹಾರ ಸಂರಕ್ಷಣಾಧಿಕಾರಿ ಸುಮಂತ್ ಶನಿವಾರ ಸಂಜೆ ಬಿದಿಬದಿ ಆಹಾರ ಅಂಗಡಿಗಳಿಗೆ ಭೇಟಿ ನೀಡಿ ಮಾದರಿ ಪರಿಶೀಲಿಸಿದರು.
Published on

ಬನ್ನೂರು: ಪಟ್ಟಣದಲ್ಲಿ ಶನಿವಾರ ಸಂಜೆ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ತಾಲೂಕು ಆಹಾರ ಸಂರಕ್ಷಣಾಧಿಕಾರಿ ಸುಮಂತ್ ಫಾಸ್ಟ್‌ಪುಡ್‌ಗಳಿಗೆ ಭೇಟಿ ನೀಡಿ, ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸದಂತೆ ಬಿದಿಬದಿ ವ್ಯಾಪಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಎಸ್‌ಆರ್‌ಪಿ ರಸ್ತೆ ಹಾಲಿನ ಡೈರಿ ಮುಂಭಾಗದ ಗೋಬಿ, ಐಸ್‌ಕ್ರೀಂ, ಪಾನಿಪುರಿ, ಬೆಲ್‌ಪುರಿ ಅಂಗಡಿಗಳಿಗೆ ಭೇಟಿ ನೀಡಿ ತಿಂಡಿ- ತಿನಿಸು ತಯಾರಿಸಲು ಬಳಸುತ್ತಿರುವ ಪದಾರ್ಥಗಳನ್ನು ಪರಿಶೀಲಿಸಿದರು. ಅನುಮಾನ ಬಂದ ವಸ್ತುಗಳ ಮಾದರಿ ಪಡೆದು ಅವರಿಗೆ ನೋಟಿಸ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಬೀದಿಬದಿ ತಿಂಡಿ, ತಿನಿಸು ಮಳಿಗೆಗಳು, ಫಾಸ್ಟ್ ಪುಡ್‌ಗಳಲ್ಲಿನ ಆಹಾರದ ಗುಣಮಟ್ಟ ಕಡಿಮೆ ಇದ್ದು, ಕೆಲವೆಡೆ ಫುಡ್ ಕಲರಿಂಗ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮಾದರಿ ಪಡೆದು ಲ್ಯಾಬಿಗೆ ಕಳುಹಿಸಲಾಗುತ್ತದೆ. ಮಾದರಿ ಪರೀಶಿಲನೆ ವೇಳೆ ಆಹಾರದ ಗುಣಮಟ್ಟ ಕಳಪೆ ಎಂದು ಕಂಡು ಬಂದಲ್ಲಿ ಂತಹ ಮಾಲೀಕರಿಗೆ 1 ಲಕ್ಷದಿಂದ 10 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುವುದು. ಜತೆಗೆ 6 ತಿಂಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಹಾರ ತಯಾರಿಕೆ ವೇಳೆ ಬಳಸುವ ಕೃತಕ ಕಲರ್‌ನಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುತ್ತ್ತವೆ. ಅರಿವಿಲ್ಲದೆ ಸಾವಿನ ಕಡೆಗೆ ಮನುಷ್ಯ ವಾಲುತ್ತಿದ್ದಾನೆ. ಈ ಬಗ್ಗೆ ನಾವು ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಕೃತಕ ಪುಡ್ ಕಲರ್ ಬಳಕೆ ಪ್ರಕರಣ ಕಂಡುಬರುತ್ತಿದೆ ಎಂದು ಬೇಸರಿಸಿದರು. ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ದೊರೆತ ಹೆಸರಾಂತ ಕಂಪನಿ ಕಬಾಬ್ ಮಸಾಲ ಮಾದರಿಯನ್ನು ಲ್ಯಾಬ್ ಕಳುಹಿಸಿ, ವಿವರ ಪಡೆಯಲಾಗಿದೆ. ಆ ಮಸಾಲೆ ಕಳಪೆ ಎಂದು ದೃಢಪಟ್ಟಿದೆ. ಕಳಪೆ ಉತ್ಪನ್ನ ಮಾರಾಟ ಮಾಡುವ ಕಂಪನಿ ವಿರುದ್ಧ ಮುಂದಿನ ದಿನದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net