ದರ್ಶನ್ ಗನ್ ಲೈಸೆನ್ಸ್ ಹಿಂಪಡೆಯಲು ನೋಟಿಸ್

darshan bail case postponed
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳಿ ಇರುವ ಗನ್ ಲೈಸೆನ್ಸ್ ಅನ್ನು ಪೊಲೀಸರು ಹಿಂಪಡೆಯುವ ಸಾಧ್ಯತೆಯಿದೆ.

ಕೊಲೆ ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದರ್ಶನ್, ಪರವಾನಗಿ ಗನ್ ಬಳಸಿಕೊಂಡು ಪ್ರಕರಣದ ಸಾಕ್ಷ್ಯಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಹೀಗಾಗಿ ಏಕೆ ನಿಮ್ಮ ಗನ್ ಲೈಸೆನ್ಸ್ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿ ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಅವರು ನಟ ದರ್ಶನ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ನೋಟಿಸ್ ತಲುಪಿದ 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ದರ್ಶನ್ ಸಷ್ಟನೆ ಬಳಿಕ ಗನ್ ಲೈಸೆನ್ಸ್ ಹಿಂಪಡೆಯುವ ಬಗ್ಗೆ ಪೊಲೀಸರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜಾಮೀನು ರದ್ದುಗೊಳಿಸಬೇಕು ಎಂಬುದಕ್ಕೆ ವಾದ ಮಂಡಿಸಲು ಪೊಲೀಸರ ಪರ ವಕೀಲರು ಸಕಲ ತಯಾರಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net