ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೋಟ್‌ಬುಕ್ ಡ್ರೈವ್ ಸಾಥ್

ಬೀರೂರಿನ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಮತ್ತು ಇತರೆ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು.
ಬೀರೂರಿನ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಮತ್ತು ಇತರೆ ಕಲಿಕಾ ಪರಿಕರಗಳನ್ನು ವಿತರಿಸಲಾಯಿತು.
Published on
ಬೀರೂರು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳು ನಡೆಸುವ ಉಪಕ್ರಮವಾದ ನೋಟ್‌ಬುಕ್ ಡ್ರೈವ್ ಸಂಸ್ಥೆ 2002 ರಿಂದ ಸರ್ಕಾರಿ ಶಾಲಾ ಶಿಕ್ಷಣ ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್ ತಿಳಿಸಿದರು.
ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಟ್‌ಬುಕ್‌ಡ್ರೈವ್‌ನಿಂದ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಮತ್ತು ಇತರೆ ಕಲಿಕಾ ಪರಿಕರಗಳನ್ನು ವಿತರಿಸಿ ಮಾತನಾಡಿ, ಇಲ್ಲಿನ ವಿದ್ಯಾರ್ಥಿ ಕೂಟ ತಾವು ಗಳಿಸಿರುವುದರಲ್ಲಿ ಒಂದು ಭಾಗವನ್ನು ಉಳಿಸಿ ಅದನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಬಳಸುತ್ತಿದೆ. ಅದೇ ರೀತಿ ಈ ಶಾಲೆಯಲ್ಲೂ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ ಶಾಲೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದ್ದರಿಂದ ಶಾಲೆ ದಾಖಲಾತಿ ಹೆಚ್ಚುತ್ತಿದ್ದು, ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು ಪ್ರತಿಯೊಬ್ಬರೂ ಯತ್ನಿಸಬೇಕು ಎಂದರು.
ಸಂಸ್ಥೆ ಸದಸ್ಯ ವಿಕಾಸ್ ಮಾತನಾಡಿ, ನೋಟ್‌ಬುಕ್ ಡ್ರೈವ್‌ನ ಗುರಿ ಸರ್ಕಾರಿ ಶಾಲಾ ಶಿಕ್ಷಣ ಬಲಪಡಿಸುವುದು ಮತ್ತು ಹಿಂದುಳಿದ ಮಕ್ಕಳಿಗೆ ಅವರ ಶೈಕ್ಷಣಿಕ ಆಕಾಂಕ್ಷೆಗಳನ್ನು ಮುಂದುವರಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುವುದು. ತನ್ನ ವಾರ್ಷಿಕ ನೋಟ್‌ಬುಕ್ ವಿತರಣಾ ಕಾರ್ಯಕ್ರಮದ ಭಾಗವಾಗಿ ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳು ಮತ್ತು ಅಗತ್ಯ ಲೇಖನ ಸಾಮಗ್ರಿಗಳನ್ನು ಒದಗಿಸುತ್ತದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್.ಪ್ರಸನ್ನಕುಮಾರ್, ಸಿದ್ದರಾಜು ನಾಯ್ಕ,  ಮುಖ್ಯಶಿಕ್ಷಕಿ ಅನುಸೂಯ, ಶಿಕ್ಷಕರಾದ ತಿಪ್ಪೇಶ್, ಚಂದ್ರಶೇಖರ್, ಸಂಪತ್ ಕುಮಾರ್, ಉಮೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದೇವರಮನೆ ಗಿರೀಶ್, ಕಾರ್ಯದರ್ಶಿ ಗುರುಪ್ರಸಾದ್, ಶಬ್ಬೀರ್, ಮುಖಂಡರಾದ ಜಯಪ್ರಕಾಶ್, ಗೋಕುಲ್, ಗಣೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net