ಖಾರ ಪ್ರಿಯರೇ…ಟೊಮ್ಯಾಟೋ ಮಾತ್ರವಲ್ಲ, ಈಗ ಈ ತರಕಾರಿಯೂ ಬಲು ದುಬಾರಿ!

vegetable
Published on


ಬೆಂಗಳೂರು: ದೇಶದಲ್ಲಿ ಟೊಮ್ಯಾಟೋ ಬಳಿಕ ಈಗ ಮೆಣಸಿನಕಾಯಿಯೂ ದುಬಾರಿಯಾಗಿದೆ. ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿಯೂ ಈಗ ಏರಿಕೆ ಕಂಡುಬಂದಿದೆ.

ಕಳೆದ ತಿಂಗಳು ಮೆಣಸಿನಕಾಯಿಯ ಬೆಲೆಯು ಕಿಲೋಗೆ 60ರೂ.ಗಳ ಆಸುಪಾಸಿನಲ್ಲಿತ್ತು. ಆದರೀಗ ಕೆಜಿಗೆ 130ರೂ. ಆಗಿದೆ.
ಇನ್ನು ಟೊಮ್ಯಾಟೋ ವಿಚಾರಕ್ಕೆ ಬರುವುದಾದರೆ ಬೆಂಗಳೂರು ನಗರದಲ್ಲೂ ಪ್ರತಿ ಕೆಜಿ‌ ಟೊಮ್ಯಾಟೋ ಬೆಲೆ 100-120 ರೂಪಾಯಿಯಿದ್ದರೆ, ಇತ್ತ ದೇಶದಲ್ಲಿಯೂ ಟೊಮ್ಯಾಟೋ ಬೆಲೆಯೂ ಏರಿಕೆಯಾಗಿದೆ. ಉತ್ತರಾಖಂಡ ರಾಜ್ಯದ ಗಂಗೋತ್ರಿ, ಯಮುನೋತ್ರಿಯಲ್ಲಿ ಪ್ರತಿ ಕೆಜಿ ಟೊಮ್ಯಾಟೋ ಬೆಲೆ 250 ರೂಪಾಯಿಯಾಗಿದೆ.

ಎಲ್ಲಿ ಎಷ್ಟಿದೆ? (ಕೆಜಿಗೆ)
ಉತ್ತರಕಾಶಿ-200 ರೂ.
ಕೋಲ್ಕತ್ತಾ-152 ರೂ.
ದೆಹಲಿ-120 ರೂ.
ಚೆನ್ನೈ-117 ರೂ.
ಮುಂಬೈ- 108ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net