"ಬರೀ ಯೂನಿಫಾರಂ ಧರಿಸಿದರೆ ಸಾಲಲ್ಲ".... ಅಂತ ಸೇನಾ ತರಬೇತಿಯ ರುಚಿ ನೋಡುತ್ತಿರುವ ಕಂಗನಾ!

kan
Published on

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸದಾಗಿ ನಟಿಸುತ್ತಿರುವ ಚಿತ್ರದ ಹೆಸರು 'ತೇಜಸ್'. ಇದರಲ್ಲಿ ಆಕೆ ಭಾರತೀಯ ವಾಯುಪಡೆಯ ಪೈಲಟ್​ ಪಾತ್ರ ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಭರಪೂರ ಸಿದ್ಧತೆ ನಡೆಸಿದ್ದಾರಂತೆ. ಅದರ ಭಾಗವಾಗಿ ಸೇನಾ ತರಬೇತಿಯ ಕೆಲವು ಕಷ್ಟಕರ ವ್ಯಾಯಾಮಗಳನ್ನು ಮಾಡುತ್ತಿದ್ದಾರಂತೆ!

ಮುಂಬೈನ ಸ್ಟುಡಿಯೋ ಒಂದರಲ್ಲಿ 'ತೇಜಸ್​' ಚಿತ್ರದ ಶೂಟಿಂಗ್ ಮತ್ತು ಟ್ರೈನಿಂಗ್​ ಹೇಗೆ ನಡೆಯುತ್ತಿದೆ ಎಂಬುದನ್ನು ತಮ್ಮ ಅಭಿಮಾನಿಗಳೊಂದಿಗೆ ಕಂಗನಾ ಹಂಚಿಕೊಂಡಿದ್ದಾರೆ. ಸೇನಾ ತರಬೇತಿಯಲ್ಲಿ ಮತ್ತು ಸಾಹಸ ಕ್ರೀಡೆಗಳಲ್ಲಿ ಬಳಸುವ ನೆಟ್​ ಕ್ಲೈಂಬಿಂಗ್​ಅನ್ನು ಮಾಡುತ್ತಿರುವ ತಮ್ಮ ವೀಡಿಯೋ ತುಣಕನ್ನು ನಿನ್ನೆ ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ.

"ಬರೀ ಸೈನಿಕರ ಯೂನಿಫಾರಂ ಧರಿಸಿದರೆ ಸಾಕಾಗೋದಿಲ್ಲ... '​ಮಸಲ್ಸ್​​ ಆಫ್​ ಐರನ್​' ಮತ್ತು 'ನರ್ವ್ಸ್ ಆಫ್ ಸ್ಟೀಲ್' ಹೊಂದಲು ಹೇಗೆ ಸಾಧ್ಯವಾಗುತ್ತೆ ಅನ್ನುವುದನ್ನು ಅರ್ಥಮಾಡಿಕೊಳ್ಳೋಕೆ, ಅವರು(ಸೈನಿಕರು) ಎದುರಿಸುವ ಕಷ್ಟಗಳನ್ನು, ಹೋರಾಟಗಳನ್ನು ಅನುಭವಿಸುವುದು ಮುಖ್ಯ" ಎಂದು ಬರೆದಿದ್ದಾರೆ ಕಂಗನಾ. ಅದಕ್ಕೇ "ಯೂನಿಫಾರಂ ಧರಿಸಲು ಯೋಗ್ಯತೆಯನ್ನು ಸಂಪಾದಿಸಲು ತರಬೇತಿ ಪಡೆಯುತ್ತಿರುವುದಾಗಿ" ಹೇಳಿದ್ದಾರೆ.

ಮಹಿಳೆಯರ ಮೇಲೆ ಆಧರಿಸಿದ ಚಲನಚಿತ್ರಗಳಲ್ಲಿ ಪ್ರಬಲ ವ್ಯಕ್ತಿತ್ವದ ಛಾಪು ಮೂಡಿಸುವುದು ಕಂಗನಾ ವಿಶೇಷತೆ. ಆದ್ದರಿಂದ ಸೈನ್ಯದ ಸಮವಸ್ತ್ರದಲ್ಲಿ ಮಹಿಳಾ ಹೀರೋ ಪಾತ್ರ ಹೊಂದಿರುವ ತೇಜಸ್​​ ಬಗ್ಗೆ ಅವರು ಉತ್ಸುಕರಾಗಿದ್ದಾರೆ. “ತೇಜಸ್​ ಒಂದು ಆಹ್ಲಾದಕರ ಕಥೆಯಾಗಿದೆ. ಕರ್ತವ್ಯಕ್ಕಾಗಿ ಪ್ರತಿದಿನ ಹಲವಾರು ತ್ಯಾಗಗಳನ್ನು ಮಾಡುವ ಸಾಹಸಿ ಪುರುಷರು ಮತ್ತು ಮಹಿಳೆಯರ ಬಗ್ಗೆ ತೆಗೆಯುತ್ತಿರುವ ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಸೇನಾ ಪಡೆಗಳ ಮತ್ತು ಅದರಲ್ಲಿರುವ ಹೀರೋಗಳನ್ನು ಸೆಲಿಬ್ರೇಟ್​ ಮಾಡುತ್ತದೆ, ನಮ್ಮ ಚಿತ್ರ" ಎಂದು ಕಂಗನಾ ಚಿತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net