ಬ್ಲಾಕ್​​​​ಬಸ್ಟರ್ 'ದಿವಾರ್'ಗೆ ಮೊದಲು ನಾಯಕನಾಗಿದ್ದು ಅಮಿತಾಭ್ ಅಲ್ಲವಂತೆ, ಮತ್ಯಾರು ಗೊತ್ತಾ?

amithab
Published on


ಮುಂಬೈ: 1975ರಲ್ಲಿ ಬಿಡುಗಡೆಯಾದ 'ದಿವಾರ್' ಅಮಿತಾಭ್ ಬಚ್ಚನ್ ಅವರ ಬ್ಲಾಕ್​​​​ಬಸ್ಟರ್ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ವಿಜಯ್ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ, ಅಮಿತಾಭ್, ತಮ್ಮ ಅಭಿನಯಕ್ಕಾಗಿ ಅನೇಕರ ಮೆಚ್ಚುಗೆ ಗಳಿಸಿದರು. ಆದರೆ ನಿಮಗೆ ಗೊತ್ತಾ, ಈ ಚಿತ್ರಕ್ಕೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ಅಮಿತಾಭ್ ಅಲ್ಲ. ಹೌದು, ವರದಿಗಳ ಪ್ರಕಾರ, ದಿವಾರ್ ಚಿತ್ರದಲ್ಲಿ ವಿಜಯ್ ಪಾತ್ರಕ್ಕೆ ಆಯ್ಕೆಯಾಗಿದ್ದು ಸೂಪರ್ ಸ್ಟಾರ್ ರಾಜೇಶ್ ಖನ್ನಾ.

ನಿರ್ಮಾಪಕರಿಗೆ ಇಷ್ಟವಾಗಿದ್ದ ನಟ
ದಿವಾರ್ ಚಿತ್ರದ ನಿರ್ಮಾಪಕ ಗುಲ್ಶನ್ ರೈ, ರಾಜೇಶ್ ಖನ್ನಾ ಅವರು ನಾಯಕನ ಪಾತ್ರ ನಿರ್ವಹಿಸಬೇಕೆಂದು ಬಯಸಿದ್ದರು. ಆದರೆ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಗುಲ್ಶನ್ ರೈ ನಿರ್ಧಾರ ಒಪ್ಪಲಿಲ್ಲ. ಹಾಗಾಗಿ ರಾಜೇಶ್ ಖನ್ನಾ ಆಯ್ಕೆಯಾಗಲಿಲ್ಲ ಎನ್ನಲಾಗಿದೆ. ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ದಿವಾರ್ ಚಿತ್ರಕಥೆಯನ್ನು ಒಟ್ಟಿಗೆ ಬರೆದರು. ಆಗ ಯಶ್ ಚೋಪ್ರಾ ಸ್ಕ್ರಿಪ್ಟ್ ಓದಿ ತುಂಬಾ ಪ್ರಭಾವಿತರಾದರು, ಈ ಚಿತ್ರವು ಬ್ಲಾಕ್​​​​ಬಸ್ಟರ್ ಆಗಲಿದೆ ಎಂದು ಭವಿಷ್ಯ ನುಡಿದ್ದರು. ಅಷ್ಟೇ ಅಲ್ಲ, ಮೊದಲು ದಿವಾರ್ ನಿರ್ದೇಶಿಸುವ ಸಲುವಾಗಿ ಗಾರ್ದಿಶ್ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದರು.

ಕೋಟಿ ಬಾಚಿದ ಚಿತ್ರ
ಸಲೀಂ ಮತ್ತು ಜಾವೇದ್ ಅವರು ಕೆಲವು ವಿಷಯದ ಬಗ್ಗೆ ರಾಜೇಶ್ ಖನ್ನಾ ಜೊತೆ ವಿವಾದ ಹೊಂದಿದ್ದರು. ಹಾಗಾಗಿ ಮುಖ್ಯ ಪಾತ್ರ ಕೊಡಲು ಕೊಡಲಿಲ್ಲ, ಕೊನೆಗೆ ಚಿತ್ರಕ್ಕೆ ಅಮಿತಾಭ್ ಆಯ್ಕೆಯಾದರು. ಅಮಿತಾಭ್ ಶೋಲೆ ಮತ್ತು ದಿವಾರ್ ಎರಡನ್ನೂ ಏಕಕಾಲದಲ್ಲಿ ಚಿತ್ರೀಕರಿಸಿದರಲ್ಲದೆ, ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದರು. ಆ ಸಮಯದಲ್ಲಿಯೇ ಈ ಚಿತ್ರವು ದೇಶಾದ್ಯಂತ 1 ಕೋಟಿ ರೂ.ಗಿಂತ ಹೆಚ್ಚು ಗಳಿಸಿತ್ತು. ಈ ಚಿತ್ರದಲ್ಲಿ ಶಶಿ ಕಪೂರ್ ಮತ್ತು ನಿರುಪಾ ರೈ ಕೂಡ ನಟಿಸಿದ್ದಾರೆ. ದಿವಾರ್ ಚಿತ್ರಕಥೆಯಿಂದ ಹಿಡಿದು ಕಲಾವಿದರ ಅಭಿನಯದ ತನಕ ಎಲ್ಲವನ್ನೂ ಪ್ರೇಕ್ಷಕರು ಅತ್ಯುತ್ತವಾಗಿ ಸ್ವೀಕರಿಸಿದರು.

ಪ್ರಸ್ತುತ ಅಮಿತಾಬ್ ಬಚ್ಚನ್, ಗಣಪಥ್: ಭಾಗ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಕೃತಿ ಸನೋನ್ ಮತ್ತು ಟೈಗರ್ ಶ್ರಾಫ್ ಸಹ ನಟಿಸಿದ್ದಾರೆ. ಚಿತ್ರವನ್ನು ಅಕ್ಟೋಬರ್ 20 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net