3 ದಿನದಲ್ಲಿ 8 ಲಕ್ಷ ಕೇಸ್:​ ಕರೊನಾ ವೈರಸ್​ ಆರ್ಭಟಕ್ಕೆ ತತ್ತರಿಸುತ್ತಿದೆ ಉತ್ತರ ಕೊರಿಯಾ

Korea
Published on

ಸಿಯೋಲ್​: ಉತ್ತರ ಕೊರಿಯಾದಲ್ಲಿ ಕೋವಿಡ್​ ಸಾಂಕ್ರಾ-ಮಿಕತೆ ತೀವ್ರ ಸ್ವರೂಪದಲ್ಲಿ ತಲೆಯೆತ್ತಿದ್ದು, ಕೇವಲ 3 ದಿನಗಳಲ್ಲಿ 8,20,620 ಪ್ರಕರಣಗಳು ದೃಢಪಟ್ಟಿವೆ. ಭಾನುವಾರ 15 ಜನರ ಸಾವಿನೊಂದಿಗೆ ದೇಶದಲ್ಲಿ ಕರೊನಾ ಸೋಂಕಿಗೆ ಇದುವರೆಗೆ ಬಲಿಯಾ-ದವರ ಸಂಖ್ಯೆ 42ಕ್ಕೆ ಏರಿದೆ. ಕನಿಷ್ಠ 3,24,550 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ದೇಶದಲ್ಲಿ ಸೋಂಕಿನ ಮೊದಲ ಕೇಸ್​ ದೃಢಪಟ್ಟಿರುವ ಬಗ್ಗೆ ಸರ್ಕಾರ ಗುರುವಾರಷ್ಟೇ ಮಾಹಿತಿ ಪ್ರಕಟಿಸಿದ್ದು ಅದಾದ ಕೆಲವೇ ದಿನಗಳಲ್ಲಿ ಮಹಾಮಾರಿಯ ಅಬ್ಬರ ತಾಂಡವವಾಡಲು ಆರಂಭವಾಗಿದೆ. ದೇಶವ್ಯಾಪಿ ಲಾಕ್​ಡೌನ್​ಗೆ ಆದೇಶಿಸಲಾಗಿದೆ. ಕರೊನಾ ಆಸ್ಫೋಟದಿಂದ ದೇಶದಲ್ಲಿ "ಮಹಾ ಅಲ್ಲೋಲ ಕಲ್ಲೋಲ' ಉಂಟಾಗಿದೆ ಎಂದು ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಹೇಳಿದ್ದಾರೆ. ದೇಶದ ಎಲ್ಲ ಪ್ರಾಂತ್ಯಗಳು, ನಗರಗಳು ಮತ್ತು ಕೌಂಟಿಗಳಲ್ಲಿ ಲಾಕ್​ಡೌನ್​ ಹೇರಲಾಗಿದೆ. ಕಾರ್ಖಾನೆಗಳು, ಉತ್ಪಾದನಾ ಟಕಗಳು ಹಾಗೂ ವಸತಿ ಪ್ರದೇಶಗಳನ್ನು ಮುಚ್ಚಲಾಗಿದೆ ಎಂದು ಸುದ್ದಿಸಂಸ್ಥೆ ಕೆಸಿಎನ್​ಎ ವರದಿ ಮಾಡಿದೆ.

ಅಣ್ವಸ್ತ್ರ ಪರೀಕ್ಷೆ?: ದೇಶದಲ್ಲಿ ಕರೊನಾ ಸೋಂಕು ಆಸ್ಫೋಟದಿಂದ ಸೃಷ್ಟಿಯಾಗಿರುವ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಅಧ್ಯಕ್ಷ ಕಿಮ್​ ಅಣ್ವಸ್ತ್ರ ಪರೀೆಗೆ ಮುಂ-ದಾ-ಗಬ-ಹುದು ಎಂದು ರಾಜಕೀಯ ವೀಕ್ಷಕರು ಅಭಿಪಾ-್ರ-ಯ-ಪಟ್ಟಿದ್ದಾರೆ. ಅಣ್ವಸ್ತ್ರ ಪರೀೆಗೆ ಉತ್ತರ ಕೊರಿಯಾ ಸಿದ್ಧವಾಗಿದೆ ಎಂದು ಅಮೆರಿಕ ಮತ್ತು ದಣ ಕೊರಿಯಾ ಎಚ್ಚರಿಸಿವೆ. ಕಿಮ್​ ಯಾವ ದಿನವಾದರೂ ಅಣ್ವಸ್ತ್ರ ಪರೀೆಗೆ ಆದೇಶ ಹೊರಡಿಬಹುದು ಎಂದು ಅವು ಹೇಳಿವೆ.

ಆ್ಯಂಟಿಬಯಾಟಿಕ್​ ಪ್ರಾಣಕ್ಕೆ ಕುತ್ತು?

ರೋಗಗಳ ಚಿಕಿತ್ಸೆಯಲ್ಲಿ ಬಳಸುವ ಆ್ಯಂಟಿಬಯಾಟಿಕ್​ಗಳಿಂದ ಜೀವಕ್ಕೇ ಕುತ್ತು ತರುವ ಶಿಲೀಂಧ್ರ ಸೋಂಕು (ಂಗಲ್​ ಇನ್​-ೆಕ್ಷನ್​) ಉಂಟಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಕ್ಷಯ ರೋಗದಿಂದ ಬಲಿಯಾಗುವಷ್ಟೇ ಜನರು ಂಗಲ್​ ಇನ್​-ೆಕ್ಷನ್​-ಗಳಿಂದ ಮೃತಪಡುತ್ತಾರೆ. ಕ್ಯಾನ್ಸರ್​ ಅಥವಾ ಎಚ್​-ಐವಿ ಅಥವಾ ಕೋವಿಡ್​ನಂಥ ವೈರಲ್​ ಸೋಂಕು ಇದ್ದು ರೋಗನಿರೋಧಕ ಶಕ್ತಿ ಕಡಿಮೆ ಇರುವಂಥವರಲ್ಲಿ ಶಿಲೀಂಧ್ರ ಸೋಂಕು ಮೇಲುಗೈ ಪಡೆಯುತ್ತದೆ. ಇದು ಪ್ರಾಣಕ್ಕೆ ಎರ--ವಾಗಲು ಕಾರಣವಾಗುತ್ತದೆ ಎಂದು ರ್ಬಮಿಂಗ್​ಹ್ಯಾಮ್​ ಯುನಿವರ್ಸಿಟಿಯ ಇಮ್ಯುನಾಲಜಿ ಅಂಡ್​ ಇಮ್ಯು-ನೊಥೆರಪಿ ೆಲೋ ಆಗಿರುವ ರೆಬೆಕ್ಕಾ ಎ. ಡ್ರಮ್ಮಂಡ್​ ಅಧ್ಯ-ಯನ ವರದಿಯಲ್ಲಿ ಹೇಳಿದ್ದಾರೆ.

ಶಾಂಘೈನಲ್ಲಿ ವಹಿವಾಟು ಆರಂಭ

ಕರೊನಾ ನಿಯಂತ್ರಣಕ್ಕಾಗಿ ಲಾಕ್​-ಡೌನ್​ ಮತ್ತಿತರ ಕಠಿಣ ರ್ನಿಬಂಧ-ಗಳಿಗೆ ಒಳಗಾಗಿರುವ ಚೀನಾದ ಮಹಾ-ನಗರ ಶಾಂಘೈಯಲ್ಲಿ ಸೂಪರ್​ಮಾರ್ಕೆಟ್​, ಮಾಲ್​ ಮತ್ತು ರೆಸ್ಟೋರೆಂಟ್​ಗಳು ಸೀಮಿತ ಸಾಮರ್ಥ್ಯದೊಂದಿಗೆ ಸೋಮ-ವಾರ ಕಾರ್ಯಾರಂಭ ಮಾಡಲಿವೆ. ಆದರೆ, ಜನರನ್ನು ಮನೆಯಿಂದ ಹೊರಗೆ ಓಡಾಡಲು ಅವಕಾಶ ನೀಡಲಾಗುತ್ತದೆಯೆ ಇಲ್ಲವೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಸಕ್ರಿಯ ಕೇಸ್​ ಕುಸಿತ

ಭಾರತದಲ್ಲಿ ಭಾನುವಾರ ಕರೊನಾ ಸೋಂಕಿನ 2,487 ಹೊಸ ಪ್ರಕರಣ ಗಳು ವರದಿಯಾಗಿವೆ. 13 ಜನರು ಮರಣಿಸಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 4,31,21,599 ಹಾಗೂ ಮೃತರ ಸಂಖ್ಯೆ 5,24,214ಕ್ಕೆ ತಲು ಪಿದೆ ಎಂದು ಕೇಂದ್ರ ಆರೋಗ್ಯ ಸಚಿ ವಾಲಯ ತಿಳಿಸಿದೆ. ಸಕ್ರಿಯ ಕೇಸ್​ಗಳ ಸಂಖ್ಯೆ 17,692ಕ್ಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net