ಬೇಕಾದರೆ ಆತ್ಮಹತ್ಯೆ ಮಾಡಿಕೊಳ್ಳಿ! ಆದ್ರೆ.. ಉಕ್ರೇನ್​ ವಿರುದ್ಧದ ಯುದ್ಧದಲ್ಲಿ ಉತ್ತರ ಕೊರಿಯಾ ಸೈನಿಕರ ಪ್ರಾಣಕ್ಕಿಲ್ಲ ಬೆಲೆ | Ukraine

Ukraine
Published on

Ukraine War: ಪ್ರಸ್ತುತ ಉಕ್ರೇನ್​ ಭಾಗವನ್ನು ಸಂಪೂರ್ಣ ನಾಶಗೊಳಿಸಲು ಪಣತೊಟ್ಟು ನಿಂತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟೀನ್​ಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂಗ್ ಜಾಂಗ್​​ ಉನ್​ ಸಾಥ್​ ನೀಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮೊದಲು ತನ್ನದೇ ದೇಶದ 100ಕ್ಕೂ ಹೆಚ್ಚು ಸೈನಿಕರು ರಷ್ಯಾಗಾಗಿ ಹೋರಾಡುವಾಗ ಜೀವ ಕಳೆದುಕೊಂಡಿದ್ದರೂ ಸಹ ಅದನ್ನು ಲೆಕ್ಕಿಸದೆ, ಮತ್ತೊಂದು ವಿಶೇಷ ಸೇನಾ ಪಡೆಯನ್ನು ಕಳಿಸಲು ಸಜ್ಜಾದ ಕಿಂಗ್ ಜಾಂಗ್​ ನಿರ್ಧಾರ ಹಲವರಲ್ಲಿ ಭಾರೀ ಅನುಮಾನಕ್ಕೆ ಕಾರಣವಾಯಿತು. ಇದೆಲ್ಲದರ ಮಧ್ಯೆಯೂ ನಿರಂತರ ಹೋರಾಟದಲ್ಲಿ ತೊಡಗಿರುವ ಉತ್ತರ ಕೊರಿಯಾ ಸೈನಿಕರು ಸಾವಿನಲ್ಲಿ ದುರಂತ ಅಂತ್ಯ ಕಾಣುತ್ತಿರುವುದು ಶೋಚನೀಯ.

ಉಕ್ರೇನ್​ ವಿರುದ್ಧದ ಭೀಕರ ಯುದ್ಧದಲ್ಲಿ ರಷ್ಯಾ ಪರ ಹೋರಾಡುತ್ತಿರುವ ಉತ್ತರ ಕೊರಿಯನ್ ಸೈನಿಕರು, ಉಕ್ರೇನ್ ದಾಳಿಗೆ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ ಕನಿಷ್ಠ 3 ಸಾವಿರಕ್ಕೂ ಹೆಚ್ಚು ಉತ್ತರ ಕೊರಿಯಾ ಸೈನಿಕರು ಉಕ್ರೇನ್​ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇಷ್ಟಾದರೂ ತೊಟ್ಟಿರುವ ಪಣಕ್ಕೆ ಬದ್ಧವಾಗಿರುವ ಕಿಂಗ್ ಜಾಂಗ್​, ರಷ್ಯಾ ಸೋಲಿಗೆ ಶರಣಾಗಬಾರದು ಎಂದು ಹೆಚ್ಚುವರಿ ಯೋಧರನ್ನು ಪುಟಿನ್ ನೆಲಕ್ಕೆ ಕಳಿಸುತ್ತಿರುವುದು ಇದೀಗ ಯುದ್ಧದ ಭೀಕರತೆಯನ್ನು ಎತ್ತಿಹಿಡಿದಿದೆ.

ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ತಮ್ಮದೇ ಸೈನಿಕರು ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಸಂಗತಿ ಗೊತ್ತಿದ್ದರೂ ಕೂಡ ಉತ್ತರ ಕೊರಿಯಾ ಮಾತ್ರ, ಸತ್ತರೇ ಸತ್ತುಬಿಡಿ. ಆದರೆ ಅವರ ಕೈಯಲ್ಲಿ ಜೀವಂತವಾಗಿ ಉಳಿಯಬೇಡಿ ಎಂದು ಕರೆ ನೀಡಿರುವುದು ಆಶ್ಚರ್ಯಕರ. ಉಕ್ರೇನ್ ಪಡೆ ನಿಮ್ಮನ್ನು​ ಸೆರೆಹಿಡಿಯುವ ಮುನ್ನವೇ ಆತ್ಮಹತ್ಯೆ ಅಥವಾ ಸ್ವಯಂ ಸ್ಫೋಟಗೊಳ್ಳುವ ಪ್ರಕ್ರಿಯೆಯನ್ನು ಅನುಸರಿಸಿ ಎಂದು ಸೈನಿಕರಿಗೆ ಉತ್ತರ ಕೊರಿಯಾ ಒತ್ತಡ ಹೇರಿದೆ ಎಂದು ಶಾಸಕ ಲೀ ಸಿಯೊಂಗ್-ಕ್ವೇನ್ ರಾಷ್ಟ್ರೀಯ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net