ಈ ಹಾವುಗಳಲ್ಲಿ ವಿಷವಿಲ್ಲ, ಕಚ್ಚಿದ್ರೆ ಹೋಗಲ್ಲ ಪ್ರಾಣ! ನೀವು ತಿಳಿಯಬೇಕಾದ ಉರಗಗಳ ಹೆಸರಿವು | Non Venomous

ವಿಜಯವಾಣಿ (82)
Published on

Non Venomous: ಹಾವುಗಳನ್ನು ಕಂಡರೆ ಹೆದರಿ ಒಂದು ಮೈಲಿ ದೂರ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಉರಗಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಹಲವು ತನ್ನ ವಿಷದಿಂದ ಮಾನವನ ಜೀವಕ್ಕೆ ಹಾನಿ ಮಾಡಿದ್ರೆ, ಕೆಲವು ಮನುಷ್ಯನಿಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ಅವು ವಿಷವಿಲ್ಲದ ಹಾವುಗಳು.

ಮಳೆಗಾಲದಲ್ಲಿ ಹಾವುಗಳು ಹೊರಬರುವುದು ಸಾಮಾನ್ಯ. ಮಳೆಹನಿಗಳು ನೆಲದ ಮೇಲೆ ಬಿದ್ದಾಗ, ನೆಲದೊಳಗೆ ಅಡಗಿರುವ ಅನೇಕ ಜೀವಿಗಳು ಹೊರಬರುವುದು ಸರ್ವೆ ಸಾಮಾನ್ಯ. ಮಳೆ ಬಂದಾಗ ನಾವು ಹಾವುಗಳನ್ನು ಹೆಚ್ಚಾಗಿ ಕಾಣಬಹುದು. ಹೊಲಗಳಲ್ಲಿ, ದನದ ಕೊಟ್ಟಿಗೆಗಳಲ್ಲಿ, ರಸ್ತೆಗಳಲ್ಲಿ, ಬೀದಿಗಳಲ್ಲಿ ಮತ್ತು ಕೆಲವೊಮ್ಮೆ ಮನೆಗಳಲ್ಲಿಯೂ ಹಾವುಗಳನ್ನು ನೋಡಲು ಜನ ಬೆದರುತ್ತಾರೆ. ತಿಳಿಯದೆ ಅವುಗಳ ಮೇಲೆ ಕಾಲಿಟ್ಟರೆ, ಅವು ನಿಮ್ಮನ್ನು ಕಚ್ಚಬಹುದು. ಕೆಲವು ಹಾವುಗಳು ವಿಷಕಾರಿಯಾಗಿದ್ದರೂ, ವಿಷಕಾರಿಯಲ್ಲದ ಹಾವುಗಳೂ ಇವೆ. ಹಾಗಿದ್ದರೆ, ಯಾವ ಹಾವುಗಳು ಕಚ್ಚುವುದಿಲ್ಲ. ಕಚ್ಚಿದ್ರೆ ಮನುಷ್ಯ ಸಾಯುವುದಿಲ್ಲ ಎಂಬುದರ ಮಾಹಿತಿ ಹೀಗಿದೆ ನೋಡಿ.

ಚೆಕರ್ಡ್ ಕೀಲ್‌ಬ್ಯಾಕ್ (Checkered Keelback)

ಈ ಹಾವು ಕೊಳ, ಕಾಲುವೆ ಮತ್ತು ಹೊಲಗಳ ಬಳಿ ಹೆಚ್ಚಾಗಿ ಕಂಡುಬರುತ್ತದೆ. ಇವು ಹಸಿರು ಬಣ್ಣದಲ್ಲಿದ್ದು, ದೇಹದ ಮೇಲೆ ಪಟ್ಟೆಗಳನ್ನು ಹೊಂದಿವೆ. ಈ ಜೀವಿಗಳು ನೀರಿನಲ್ಲಿ ಮೀನುಗಳನ್ನು ಬೇಟೆಯಾಡಿ ತಿನ್ನುತ್ತದೆ ಮತ್ತು ಮನುಷ್ಯರಿಂದ ದೂರವಿರುತ್ತದೆ.

ರಾಟ್​ ಸ್ನೇಕ್​ (ಕೇರೆ ಹಾವು)

Indian Rat Snake: Nature's Own Pest Control | Roundglass | Sustain

ಇದು ಭಾರತದಲ್ಲಿ ಕಂಡುಬರುವ ಅತಿ ಉದ್ದದ ವಿಷರಹಿತ ಉರಗ. ಹೊಲಗಳಲ್ಲಿ ಕಂಡುಬರುವ ಇವು, ಇಲಿ, ಹೆಗ್ಗಣಗಳನ್ನು ಭೇಟೆಯಾಡುತ್ತವೆ. ಬಹಳ ವೇಗವಾಗಿ ತೆವಳುವ ಈ ಹಾವುಗಳು, ವಿಷಯವನ್ನು ಹೊಂದಿಲ್ಲ. ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ.

ಸ್ಯಾಂಡ್ ಬೋವಾ (ಎರಡು ತಲೆ ಹಾವು)

ಇದರ ತಲೆ ಮತ್ತು ಬಾಲ ಒಂದೇ ರೀತಿ ಕಾಣುತ್ತದೆ. ಬಹುತೇಕರು ಇವುಗಳನ್ನು ಕಂಡಾಗ ಒಂದು ನಿಮಿಷ ಗೊಂದಲಕ್ಕೀಡಾಗುತ್ತಾರೆ. ಸಾಮಾನ್ಯವಾಗಿ ಇದನ್ನು ಎರಡು ತಲೆಯ ಹಾವು ಎಂದು ಕರೆಯಲಾಗುತ್ತದೆ.

ಕ್ಯಾಟ್​ ಸ್ನೇಕ್​ (ಬೆಕ್ಕಿನ ಹಾವು)

ಇವು ಸ್ವಲ್ಪ ವಿಷಕಾರಿ. ಆದರೆ, ಮನುಷ್ಯರಿಗೆ ಮಾರಕವಲ್ಲ. ಸಾಮಾನ್ಯವಾಗಿ ರಾತ್ರಿಯಲ್ಲಿ ಸಕ್ರಿಯವಾಗಿರುತ್ತವೆ. ಈ ಹಾವು ಮರಗಳಲ್ಲಿ ವಾಸಿಸುತ್ತದೆ. ಜನರು ಇದನ್ನು ಕೀಟ ಎಂದು ಭಾವಿಸಿ ಅದನ್ನು ಕೊಲ್ಲುತ್ತಾರೆ. ಈ ಹಾವು ಯಾರಿಗೂ ತೊಂದರೆ ಕೊಡದ ಜೀವ.

ವುಲ್ಫ್ ಸ್ನೇಕ್ (ತೋಳ ಹಾವು)

Indian Wolf Snake (Lycodon aulicus) · iNaturalist

ಇದು ಕ್ರೈಟ್ ಹಾವನ್ನು ಹೋಲುತ್ತದೆ. ಇದು ಜನರನ್ನು ಗೊಂದಲ ಮತ್ತು ಭಯದ ಭೀತಿಗೆ ನೂಕಬಹುದು. ಆದರೆ, ವಿಷಕಾರಿಯಲ್ಲ. ಈ ಹಾವನ್ನು ಅಕ್ರಮ ವ್ಯಾಪಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ನಿಮ್ಮ ಗಮನಕ್ಕೆ

ನೀವು ಹಾವನ್ನು ನೋಡಿದರೆ, ಅದನ್ನು ಕೊಲ್ಲುವ ಬದಲಿಗೆ ಮೊದಲು ಅರಣ್ಯ ಇಲಾಖೆ ಅಥವಾ ಸ್ಥಳೀಯ ಉರಗ ರಕ್ಷಕರಿಗೆ ಕರೆ ಮಾಡಿ. 1972ರ ವನ್ಯಜೀವಿ ಕಾಯ್ದೆಯಡಿಯಲ್ಲಿ ಹಾವುಗಳನ್ನು ಕೊಲ್ಲುವುದು ಕಾನೂನುಬಾಹಿರ. ನಿಮ್ಮ ಸುತ್ತಮುತ್ತಲಿನ ಸಾಧ್ಯವಾದಷ್ಟು ಜನರಿಗೆ ಪ್ರತಿಯೊಂದು ಹಾವು ಮಾರಕವಲ್ಲ ಎಂಬುದನ್ನು ತಿಳಿಹೇಳಿ. ಉರಗಗಳನ್ನು ಸಾಯಿಸುವ ಮೊದಲು, ಅದು ವಿಷಕಾರಿಯೇ? ಅಲ್ಲವೇ? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net