

ನವದೆಹಲಿ: ಪಾನಿ ಪುರಿ, ಗೋಲ್ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸ್ತೆ ಬದಿಯಲ್ಲಿ ನಿಂತು ತಿನ್ನುವ ಮಜವೇ ಬೇರೆಯಾಗಿದೆ. ನೀವು ಎಂದಾದರೂ ನಾನ್ವೆಜ್ ಪಾನಿಪೂರಿ (ಗೋಲ್ಗಪ್ಪಾ) ತಿಂದಿದ್ದೀರಾ? ಬಂಗಾಳದಲ್ಲಿ ಒಂದು ಅಂಗಡಿಯಿದೆ, ಅಲ್ಲಿ ಅನೇಕ ವಿಧದ ನಾನ್ವೆಜ್ ಪಾನಿಪೂರಿ ಲಭ್ಯವಿದೆ.
ಇಂದಿನ ದಿನಗಳಲ್ಲಿ ಆಹಾರದ ಮೇಲೆ ಹೊಸ ಹೊಸ ಪ್ರಯೋಗ ನಡೆಯುತ್ತವೆ. ಕೆಲವು ಇಷ್ಟವಾದ್ರೆ ಕೆಲವು ಕೇಳೋದೇ ಕಷ್ಟ. ಈಗ ಅಂತಹದ್ದೇ ಒಂದು ಫೋಟೋ ವೈರಲ್ ಆಗಿದೆ. ಬಂಗಾಳದಲ್ಲಿ ನಾನ್ವೆಜ್ ಪಾನಿಪೂರಿ ಮಾರಾಟವಾಗುತ್ತಿದೆ. ಬಂಗಾಳದಲ್ಲಿ ಒಂದು ಅಂಗಡಿಯಿದೆ, ಅನೇಕ ವಿಧದ ನಾನ್ವೆಜ್ ಪಾನಿಪೂರಿ ಲಭ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ಮೆನು ಚರ್ಚೆಗೆ ಕಾರಣವಾಗಿದೆ.
ಮೆನುವಿನಲ್ಲಿ ಏನಿದೆ?: ಮಟನ್ ಪುಚ್ಕಾ, ಚಿಕನ್ ಪುಚ್ಕಾ, ಚಾಕೊಲೇಟ್ ಪುಚ್ಕಾ, ಪ್ರಾನ್ಸ್ ಪುಚ್ಕಾ ಮತ್ತು ಫಿಶ್ ಪುಚ್ಕಾ ಅಂತಾ ಬೋರ್ಡ್ ನಲ್ಲಿ ಹಾಕಲಾಗಿದೆ. ನಾನ್ವೆಜ್ ಪಾನಿಪೂರಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾನ್ವೆಜ್ ಪಾನಿಪೂರಿ ಮೆನುವಿನ ಫೋಟೋ ನೋಡಿದ ನೆಟ್ಟಿಗರು, ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ? ಗೋಲ್ಗಪ್ಪಾ ಕೂಡ ನಾನ್ವೆಜ್ ಆಗಬಹುದೆಂದು ನಾವು ಊಹಿಸಿರಲಿಲ್ಲ. ನಾನು ಒಮ್ಮೆ ತಿಂದಿದ್ದೇನೆ. ಮನೆಯಲ್ಲಿ ಅದನ್ನು ಟ್ರೈ ಮಾಡಿದ್ದೇನೆ. ಈರುಳ್ಳಿ, ಬಟಾಣಿ, ಆಲೂಗಡ್ಡೆ, ಸಿಹಿ ಹುಳಿ ನೀರು ಇರುವ ಗೋಲ್ಗಪ್ಪಾಗೆ ಕೋಳಿ, ಮಟನ್, ಮೀನಿನೊಂದಿಗೆ ಉಣಬಡಿಸಿದರೆ ನಂಬಲು ಆಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.