ರಾಜ್ಯದ 13 ವಿಶ್ವವಿದ್ಯಾಯಗಳಿಗೆ 80 ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ: ಅಲ್ಪಸಂಖ್ಯಾತರಿಗೆ ಸಿಕ್ಕಿದೆಷ್ಟು? ಇಲ್ಲಿದೆ ಮಾಹಿತಿ

BCU
Published on

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಸೇರಿ ರಾಜ್ಯದ ವಿವಿಧ 13 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ವಿವಿಧ ಕ್ಷೇತ್ರಗಳ ಮುಸ್ಲಿಂ ಸಮುದಾಯದ 10 ಮಂದಿ ಒಳಗೊಂಡಂತೆ 80 ಮಂದಿಯನ್ನು ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್, ಡಾ. ನಟರಾಜ್ ಹುಳಿಯಾರ್, ಡಾ. ಅಮರೇಶ ನುಗಡೋಣಿ, ಚ.ಹ. ರಘುನಾಥ್. ಡಾ. ಮೊಗಳ್ಳಿ ಗಣೇಶ್ ಮತ್ತು ಡಾ. ಎಚ್.ಎಸ್. ಅನುಪಮಾ ಸೇರಿ ವಿವಿಧ 80 ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಸದಸ್ಯರ ಅಧಿಕಾರದ ಅವಧಿಯು 3 ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ನಾಮ ನಿರ್ದೇಶನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯ-1) ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಹಂಪಿ-8 ಜನ ಸದಸ್ಯರು, ಬೆಂಗಳೂರು (ಜ್ವಾನಭಾರತಿ)- 6, ಬೆಂ. ನಗರ- 6, ಬೆಂ.ಉತ್ತರ- 6, ಕುವೆಂಪು ವಿವಿ- 6, ಗುಲ್ಬರ್ಗಾ ವಿವಿ- 6, ರಾಯಚೂರು ವಿವಿ- 6,
ಬಳ್ಳಾರಿ ವಿವಿ- 6, ಜಾನಪದ ವಿವಿ-6, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-6, ರಾಣಿ ಚನ್ನಮ್ಮ ವಿವಿ, ಬೆಳಗಾವಿ-6, ಕರ್ನಾಟಕ ಅಕ್ಕ ಮಹಾದೇವಿ ಮಹಿಳಾ ವಿವಿ, ವಿಜಯಪುರ- 6 ಮತ್ತು ಸಂಸ್ಕೃತ ವಿವಿಗೆ 6 ಸದಸ್ಯರನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net