ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆ,ಲೌಡ್​ಸ್ಪೀಕರ್​ಗೆ ಬ್ರೇಕ್​

Yogi Adithanath
Published on

ಲಖನೌ: ಅನುಮತಿ ಇಲ್ಲದೇ ಯಾವುದೇ ಧಾರ್ಮಿಕ ಮೆರವಣಿಗೆಗಳು ನಡೆಸುವಂತಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೊಗಿ ಆದಿತ್ಯನಾಥ್​ ಎಚ್ಚರಿಕೆ ನೀಡಿದ್ದಾರೆ.

ಇದಲ್ಲದೇ ಲೌಡ್​ಸ್ಪೀಕರ್​ ಬಳಕೆಗೂ ಅನುಮತಿ ಇಲ್ಲ ಎಂದು ಖಡಕ್​ ವಾರ್ನಿಂಗ್ ನೀಡಿದ್ದು, ಪೊಲೀಸರು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.

ಈದ್​ ಹಾಗೂ ಅಕ್ಷಯ ತೃತೀಯ ಹಬ್ಬಗಳ ಹಿನ್ನಲೆಯಲ್ಲಿ ಹಿಂಸಾಚಾರ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ಭದ್ರತೆ ಕುರಿತು ಪೊಲೀಸ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​,ಧಾರ್ಮಿಕ ಕೇಂದ್ರದ ಸ್ಥಳಗಳಿಂದ ಲೌಡ್​ಸ್ಪೀಕರ್​ ಶಬ್ದ ಬರುವಂತಿಲ್ಲ. ಮೆರವಣಿಗಗಳಿಗೆ ಅನುಮತಿ ತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net