ನಟಿ ಸೋನಂ ಕಪೂರ್​ ಮನೆಯಲ್ಲಿ ಚಿನ್ನ ಕದ್ದ ಕಳ್ಳರಿಗೆ ಸಿಗಲಿಲ್ಲ ಜಾಮೀನು

Sonam Kapoor
Published on

ನವದೆಹಲಿ: ಬಾಲಿವುಡ್​ ನಟಿ ಸೋನಂ ಕಪೂರ್​ ಮನೆಯಲ್ಲಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಕಳ್ಳರಿಗೆ ಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ.

ಆರೋಪಿ ದೇವ್​ ವರ್ಮಾಗೆ (40) ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಜಾಮೀನು ನೀಡಿಲ್ಲ. ದೆಹಲಿಯ ನಿವಾಸದಲ್ಲಿ ಮನೆಗೆಲಸ ಮಾಡುತ್ತಿದ್ದ ಆರೋಪಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದ.

ಫೆಬ್ರವರಿಯಲ್ಲಿ 1 ಕೋಟಿ ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಬಗ್ಗೆ ನಟಿ ಸೋನಂ ಕಪೂರ್​ ಹಾಗೂ ಪತಿ ಆನಂದ್ ಅಹುಜಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.100 ಡೈಮಂಡ್​, ಚಿನ್ನ ಹಾಗೂ ವಜ್ರದ ಬಳೆಗಳು ಸೇರಿದಂತೆ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net