ರ‍್ಯಾನಿಟಿಡಿನ್ ಮಾತ್ರೆಯಲ್ಲಿ ಕ್ಯಾನ್ಸರ್​ಕಾರಕ ಅಂಶವಿಲ್ಲ

RAN
Published on

ಬೆಂಗಳೂರು:  ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಹುಣ್ಣು (ಅಲ್ಸರ್) ಸಮಸ್ಯೆಗೆ ಬಳಸುವ ‘ರ‍್ಯಾನಿಟಿಡಿನ್’ ಮಾತ್ರೆ ಕ್ಯಾನ್ಸರ್​ಕಾರಕ ಎಂಬುದು ಕೇವಲ ವದಂತಿ ಎಂದು ನಗರದ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಹೊಟೇಲ್​ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯದೇವ ಹೃದ್ರೋಗ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಟಿ.ಆರ್. ರಘು, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ತಲೆ ಮತ್ತು ಕತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ಚೌಹಾಣ್, ಜಯದೇವ ಸಂಶೋಧನಾ ಕೇಂದ್ರದ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಅಶೋಕ್​ಕುಮಾರ್, ಇಂದಿರಾಗಾಂಧಿ ಇನ್​ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್​ನ ಮಕ್ಕಳ ಗ್ಯಾಸ್ಟ್ರೋ ಎಂಟ್ರಿಯಾಲಜಿ ಸಲಹಾ ತಜ್ಞ ಡಾ. ನಾಗೇಂದ್ರಕುಮಾರ್ ಮತ್ತಿತರ ವೈದ್ಯರು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಹುಣ್ಣಿನ ಚಿಕಿತ್ಸೆಯಲ್ಲಿ ‘ರ‍್ಯಾನಿಟಿಡಿನ್’ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದರು.

ದೇಶಾದ್ಯಂತ ವೈದ್ಯರು 1981ರಿಂದ ಈ ಔಷಧದ ಬಳಕೆಗೆ ಸಲಹೆ ನೀಡುತ್ತಿದ್ದಾರೆ. ಅಮೆರಿಕದಲ್ಲಿ ರ‍್ಯಾನಿಟಿಡಿನ್ಔ ಷಧದಲ್ಲಿ ಎನ್​ಡಿಎಂಎ (ನೀರು, ಆಹಾರದಲ್ಲಿರುವ ಹಾನಿಕಾರಕ ಅಂಶ) ಹೆಚ್ಚಾಗಿದೆ. ಇದು ಕ್ಯಾನ್ಸರ್​ಕಾರಕ ಎಂದು ಹೇಳಿದ್ದು, ಗೊಂದಲಕ್ಕೆ ಕಾರಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net