ಬಿಜೆಪಿಗೆ ಶಾಕ್ ನೀಡಿದ ಎಐಎಡಿಎಂಕೆ: ಅಧಿಕಾರ ಹಂಚಿಕೆ ಇಲ್ಲ ನಾನೇ ಸಿಎಂ ಎಂದ ಎಡಪ್ಪಾಡಿ ಪಳನಿಸ್ವಾಮಿ! Edappadi K Palaniswami

Edappadi Palaniswamy (1)
Published on

Edappadi K Palaniswami : 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಜೊತೆಗಿನ ಮೈತ್ರಿಗೆ ಪ್ರಮುಖ ಮಿತ್ರ ಪಕ್ಷ ಎಐಎಡಿಎಂಕೆ ಶಾಕ್ ನೀಡಿದೆ.

ಈ ಬಾರಿ ಯಾವುದೇ ಅಧಿಕಾರ ಹಂಚಿಕೆ ಇಲ್ಲ, ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರ ರಚಿಸಲಿದ್ದು, ನಾನೇ ಸಿಎಂ ಆಗುತ್ತೇನೆ ಎಂದು ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಖಡಕ್​ ಸಂದೇಶವನ್ನು ರವಾನಿಸಿದ್ದಾರೆ.

ತಮಿಳುನಾಡಿನ ಚಿದಂಬರಂನಲ್ಲಿ ಮಾತಾಡಿದ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ, 2026ರಲ್ಲಿ ಎನ್​ಡಿಎ ಗೆದ್ದರೆ ಸಮ್ಮಿಶ್ರ ಸರ್ಕಾರ ರಚನೆ ಆಗುತ್ತೆ ಎಂಬ ಅಮಿತ್ ಷಾ ಮಾತನ್ನ ತಳ್ಳಿ ಹಾಕಿದ್ದಾರೆ. ಅಮಿತ್ ಷಾ ಹೇಳಿಕೆಯನ್ನು ನೀವು ತಪ್ಪಾಗಿ ಗ್ರಹಿಸಿದ್ದೀರಿ. ರಾಜ್ಯದಲ್ಲಿ ಮೈತ್ರಿಕೂಟವನ್ನ ಯಾರು ಮುನ್ನಡೆಸುತ್ತಿದ್ದಾರೆ? ಎಐಎಡಿಎಂಕೆ ಮುನ್ನಡೆಸುತ್ತಿದೆ. ಹಾಗಾದರೆ ಅಧಿಕಾರ ಹಂಚಿಕೆ ಬಗ್ಗೆ ಯಾರು ನಿರ್ಧರಿಸುತ್ತಾರೆ? ನಾವು ನಿರ್ಧಾರ ಮಾಡ್ತೇವೆ ಎಂದು ಹೇಳಿದರು.

ಎಡಪ್ಪಾಡಿ ಪಳನಿಸ್ವಾಮಿಯವರ ಈ ಹೇಳಿಕೆ ಹಿಂದೆ ಬಿಜೆಪಿ-ಎಐಎಡಿಎಂಕೆ ನಡುವೆ ಸೂಕ್ಷ್ಮ ರಾಜಕೀಯ ತಂತ್ರಗಾರಿಕೆ ಇದೆ. ಎಐಎಡಿಎಂಕೆ ತನ್ನ ಪ್ರಮುಖ ದ್ರಾವಿಡ ಮತದಾರರಿಂದ ದೂರವಾಗುವ ಭಯದಿಂದ ಚುನಾವಣೆಗೂ ಮುನ್ನ ಸಮ್ಮಿಶ್ರ ಸರ್ಕಾರದ ಕಲ್ಪನೆ ಸಾರ್ವಜನಿಕವಾಗಿ ಘೋಷಿಸಿದರೆ ರಾಜಕೀಯವಾಗಿ ಹಿನ್ನಡೆಯಾಗುತ್ತದೆ. ಖಾಸಗಿಯಾಗಿ ಗೆಲುವಿನ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬಹುದೆಂದು ಷಾಗೆ ಪಳನಿಸ್ವಾಮಿ ತಿಳಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಒಂಟಿಯಾಗಿ ಸ್ಪರ್ಧೆ ಮಾಡಿದ್ದರಿಂದ ಡಿಎಂಕೆ ಮೈತ್ರಿಕೂಟ ಕ್ಲೀನ್​ ಸ್ವೀಪ್ ಮಾಡಿತ್ತು. ಈ ಹಿನ್ನೆಲೆ ವಿಧಾನಸಭೆಗೂ ಮೈತ್ರಿಯಾಗದಿದ್ದರೆ ಮತ್ತೆ ಅದೇ ಪುನರಾವರ್ತನೆಯಾಗುವ ಸಾಧ್ಯತೆ ಹಿನ್ನೆಲೆ ಏಪ್ರಿಲ್​ನಲ್ಲಿ ಎಐಎಡಿಎಂಕೆ ಜೊತೆ ಅಮಿತ್​ ಷಾ ಮೈತ್ರಿ ಮಾತುಕತೆ ನಡೆಸಿದ್ದರು. ಬಳಿಕ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಘೋಷಣೆ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net