

Gold Rate: ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಸಾಧಿಸುತ್ತಿದ್ದರೆ, ಇತ್ತ ಚಿನ್ನದ ಬೆಲೆ ಮತ್ತೇ ಒಂದು ಲಕ್ಷ ರೂ, ಗಡಿದಾಟಿ ಹೋಗುತ್ತಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಸಾರ್ವಕಾಲಿಕ ದಾಖಲೆ ತಲುಪಿದೆ. ಸದ್ಯ ಈ ಸಂಗತಿ ಗ್ರಾಹಕರಿಗೆ ದೊಡ್ಡ ತಲೆಬಿಸಿ ಉಂಟುಮಾಡಿದೆ. ಅಷ್ಟಕ್ಕೂ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಆಗಿದ್ಯಾ ಅಥವಾ ಇನ್ನಷ್ಟು ದುಬಾರಿ ಆಗಿದ್ಯಾ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಚಿನ್ನದ ಬೆಲೆ ಎಷ್ಟಾಯಿತು ಎನ್ನವುದಕ್ಕಿಂತ, ಎಷ್ಟು ಕಡಿಮೆಯಾಯಿತು ಎಂಬ ಪ್ರಶ್ನೆ ಮಾತ್ರ ಜನರಲ್ಲಿ ಉಳಿದಿದೆ. ಇಷ್ಟು ದಿನ ಕೇವಲ ಗೋಲ್ಡ್ ಬೆಲೆ ಬಗ್ಗೆ ಚಿಂತಿತರಾಗಿದ್ದ ಗ್ರಾಹಕರು, ಇದೀಗ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಕಂಗಾಲಾಗಿದ್ದಾರೆ. ಇಂದೂ ಸಹ ಚಿನ್ನದ ದರ ಹೆಚ್ಚಾಗಿದೆ. ಮಂಗಳವಾರ ಮತ್ತು ಬುಧವಾರ ಕಡಿಮೆಯಾಗಿದ್ದ ಚಿನ್ನದ ಬೆಲೆ, ಗುರುವಾರ (ಜು.17) ಕೊಂಚ ಹೆಚ್ಚಳ ಕಂಡಿದೆ.
ಗುರುವಾರ ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 50 ರೂ. ಏರಿಕೆಯಾದರೆ, 22 ಕ್ಯಾರೆಟ್ ಚಿನ್ನದ 50 ರೂ. ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 15 ಡಾಲರ್ ಕುಸಿದಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 3,339 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಹೊಸ ದಾಖಲೆಯತ್ತ ಸಾಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.