ಮತ್ತೊಮ್ಮೆ ಲಾಕ್​ಡೌನ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ ಪ್ರಧಾನಿ ಮೋದಿ

modi
Published on

ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿ ಜನತೆಗೆ ದೈರ್ಯ ತುಂಬಿದ್ದಾರೆ.

ಈ ವೇಳೆ ಮತ್ತೊಮ್ಮೆ ಲಾಕ್​ಡೌನ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿರುವ ಅವರು, ಲಾಕ್​ಡೌನ್​ ಕೊನೆಯ ಅಸ್ತ್ರವಾಗಿರಲಿ. ಯಾವುದೇ ಕೆಲಸ ಹಾಗೂ ಕಾಮಗಾರಿಗಳು ನಿಲ್ಲುವುದಿಲ್ಲ. ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮರೆಯದಿರೋಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಮಿಕರು ಯಾವುದೇ ಕಾರಣಕ್ಕೂ ವಲಸೆ ಹೋಗಬೇಡಿ. ಕರೊನಾ ಹೊಡೆದೋಡಿಸಲು ಕೈ ಜೋಡಿಸಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಅಲ್ಲದೇ ಲಾಕ್​ಡೌನ್​ ಬೇಡ ಎಂದು ರಾಜ್ಯಗಳಿಗೆ ಅವರು ಮನವಿ ಮಾಡಿದ್ದಾರೆ.

ದೇಶ ಮತ್ತೊಂದು ದೊಡ್ಡ ಸಂಕಷ್ಟಕ್ಕೆ ತೆರೆದುಕೊಂಡಿದೆ. ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ. ದೇಶದಲ್ಲಿ ಅಗತ್ಯ ಲಸಿಕೆ ಸಿದ್ದವಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಇದುವರೆಗೆ 12 ಕೋಟಿ ಜನಕ್ಕೆ ಲಸಿಕೆ ನೀಡಿದ್ದೇವೆ. ವಿದೇಶಗಳಿಗೂ ಲಸಿಕೆ ನೀಡಿದ್ದೇವೆ. ಲಸಿಕಾ ತಯಾರಿಕಾ ಕಂಪನಿಗಳು ನಮಗೆ ಅಗತ್ಯ ಸಹಕಾರ ನೀಡಿವೆ. ವೈದ್ಯರು ನರ್ಸ್​ಗಳು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ನಾವು ಚಿರಋಣಿಯಾಗಿರೋಣ ಎಂದು ಪ್ರಧಾನಿ ಮನವಿ ಮಾಡಿದರು.

ಕರೊನಾ ವಿಷಯದಲ್ಲಿ 2020ಕ್ಕಿಂತಲೂ ಪರಿಸ್ಥಿತಿ ಸುಧಾರಣೆ ಆಗಿದೆ. ಉಚಿತ ಲಸಿಕಾ ಕಾರ್ಯಕ್ರಮ ಮುಂದುವರೆಯಲಿದೆ. ಆಕ್ಸಿಜನ್ ಮೂಲಕ ಆಕ್ಸಿಜನ್ ಸರಬರಾಜನ್ನು ಹೆಚ್ಚಿಸಲಾಗಿದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ನಮ್ಮ ಬಳಿ ಅಗತ್ಯ ಲಸಿಕೆ ಇದೆ ಚಿಂತಿಸದಿರಿ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net