

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೆಹಲಿ ಅತ್ಯಾಚಾರ ಪ್ರಕರಣದ ಆರೋಪಿ ಮುಕೇಶ್ ಸಿಂಗ್ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಹಾಗಂತ ನಿರ್ಭಯಾ ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿದಾಗಲೇ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸುವ ದಿನಾಂಕ ಮುಂದೂಡಲ್ಪಟ್ಟಿತ್ತು. ಈಗ ರಾಷ್ಟ್ರಪತಿ ಅದನ್ನು ವಜಾಗೊಳಿಸಿದ್ದರೂ ಕೂಡ 14 ದಿನಗಳವರೆಗೆ ಅಪರಾಧಿಗಳನ್ನು ನೇಣಿಗೇರಿಸುವಂತಿಲ್ಲ.
ಈ ಮಧ್ಯೆ ಮುಕೇಶ್ ಸಿಂಗ್ ತಮ್ಮ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ದೆಹಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಅದನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ.
ಇನ್ನೂ 14 ದಿನಗಳ ಕಾಲದ ಕಾನೂನು ಪ್ರಕ್ರಿಯೆಗಳಿದ್ದ ಗಲ್ಲಿಗೇರಿಸುವ ಹೊಸ ದಿನಾಂಕ ಇನ್ನು ಮುಂದೆ ನಿರ್ಧಾರವಾಗಲಿದೆ.
ಈ ಮಧ್ಯೆ ಉಳಿದ ಅಪರಾಧಿಗಳಾದ ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ. ಅವರೂ ಕೂಡ ಯಾವ ಹಂತದಲ್ಲಾದರೂ ದಯಾ ಅರ್ಜಿ ಸಲ್ಲಿಸಬಹುದು. ಹಾಗಾದರೆ ಗಲ್ಲಿಗೇರಿಸುವ ದಿನಾಂಕ ಮತ್ತಷ್ಟು ಮುಂದೂಡಲ್ಪಡುತ್ತದೆ. (ಏಜೆನ್ಸೀಸ್)