ಕಡಿಮೆ ಅವಧಿಯ ವಿಮಾನ ಯಾನದಲ್ಲಿ ಉಪಾಹಾರ ಸೌಲಭ್ಯ ಇಲ್ಲ

flight
Published on

ನವದೆಹಲಿ : ಕರೊನಾ ವೈರಸ್​​ನ ಹೊಸ ರೂಪಾಂತರಿಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಎರಡು ಗಂಟೆಗಳಿಗಿಂತ ಕಡಿಮೆ ಪ್ರಯಾಣಾವಧಿ ಹೊಂದಿರುವ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಊಟ-ಉಪಾಹಾರಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಏರುತ್ತಿರುವ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಆಹಾರ ಒದಗಿಸುವ ಬಗ್ಗೆ ಪುನರ್​​ವಿಮರ್ಶೆ ಮಾಡಲಾಗಿದೆ. ಪ್ರಯಾಣದ ಪೂರ್ಣ ಸಮಯವೂ ಮಾಸ್ಕ್ ಧರಿಸಿಯೇ ಇರಬೇಕೆಂಬ ನಿರ್ದೇಶನಕ್ಕೆ ಪೂರಕವಾಗಿ ನಾಗರೀಕ ವಿಮಾನಯಾನ ಸಚಿವಾಲಯವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net