

| ವಿಲಾಸ ಮೇಲಗಿರಿ ಬೆಂಗಳೂರು
ಮದುವೆ ಹಾಗೂ ಇನ್ನಿತರ ಸಮಾರಂಭಗಳ ಮೇಲೆ ಕವಿದಿದ್ದ ಲೋಕಸಭೆ ಚುನಾವಣೆಯ ನೀತಿಸಂಹಿತೆ ಕಾಮೋಡವನ್ನು ಚುನಾವಣಾ ಆಯೋಗವೇ ಸರಿಸಿದೆ. ಚುನಾವಣೆಗೂ ಮದುವೆ, ಶುಭ ಸಮಾರಂಭಗಳಿಗೂ ಸಂಬಂಧವೇ ಇಲ್ಲ. ಈ ಸಮಾರಂಭಗಳಿಗೆ ಯಾವುದೇ ಪರವಾನಗಿ ಬೇಕಿಲ್ಲ ಎಂಬುದು ಸ್ಪಷ್ಟಪಡಿಸಿದೆ.
ಆದರೆ, ಪರವಾನಗಿ ಬೇಕಿಲ್ಲ ಎಂದ ಮಾತ್ರಕ್ಕೆ ಮನಸ್ಸಿಗೆ ಬಂದ ಹಾಗೆ ಸಮಾರಂಭ ಮಾಡುವಂತಿಲ್ಲ. ಕಾರ್ಯಕ್ರಮಗಳು ರಾಜಕೀಯದ ವೇದಿಕೆಗಳಾಗುವಂತಿಲ್ಲ. ಶುಭ ಸಮಾರಂಭ ನಡೆಸುವವರು ಪರವಾನಗಿ ಪಡೆಯುವ ಅಗತ್ಯ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಜಿಲ್ಲಾ ಮಟ್ಟದಲ್ಲಿ ಎಸಿ/ಡಿಸಿಗಳ ಗಮನಕ್ಕೆ ತರುವುದು ಸೂಕ್ತ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಟ್ಟೆ, ಬರೆ ಖರೀದಿಗೂ ಅಡ್ಡಿ ಇಲ್ಲ: ಸಮಾರಂಭಗಳಿಗಾಗಿ ಬಟ್ಟೆ ಖರೀದಿಸುವವರು ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಿದೆ. ಹೀಗಾಗಿ ಉಡುಗೊರೆ ಖರೀದಿಗೆ ಸಂಬಂಧಿಸಿದ ನಿರ್ದಿಷ್ಟ ಬಿಲ್ ಹಾಗೂ ಮದುವೆ ಆಮಂತ್ರಣ ಪತ್ರಿಕೆ ಇಟ್ಟುಕೊಂಡರೆ ಸಾಕು. ಗಿಫ್ಟ್ ಸಾಗಿಸುವಾಗ ಹಲವು ಚೆಕ್ಪೋಸ್ಟ್ಗಳನ್ನು ದಾಟಬೇಕಿ ರುವುದರಿಂದ ಬಿಲ್ ಇದ್ದರೆ ಸಮಸ್ಯೆ ಇರುವುದಿಲ್ಲ.
ರಾಜಕಾರಣಿಗಳಿಗೆ ಷರತ್ತು ಅನ್ವಯ: ಯಾವುದೇ ಸಮಾರಂಭಗಳಲ್ಲಿ ರಾಜಕಾರಣಿಗಳು ಭಾಗವಹಿಸ ಬಹುದು. ಆದರೆ, ಸಮಾರಂಭವನ್ನು ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವಂತಿಲ್ಲ. ಉಡುಗೊರೆ ಹಂಚಿ ಆಮಿಷವೊಡ್ಡುವಂತಿಲ್ಲ. ಈ ಕುರಿತು ದೂರು ಬಂದರೆ ಕಾನೂನು ಕ್ರಮ ತಪು್ಪವುದಿಲ್ಲ.
ಮದುವೆ, ಶುಭ ಸಮಾರಂಭಗಳ ವಿಚಾರದಲ್ಲಿ ತಲೆ ಕೆಡಿಸಿ ಕೊಳ್ಳುವ ಅಗತ್ಯವಿಲ್ಲ. ಚುನಾವಣಾ ಆಯೋಗ ಯಾವುದೇ ನಿರ್ಬಂಧ ವಿಧಿಸಿಲ್ಲ. ಪರವಾನಗಿಯನ್ನೂ ಪಡೆಯಬೇಕಿಲ್ಲ. ಆದರೆ ಈ ವೇದಿಕೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಂತಿಲ್ಲ. | ವೆಂಕಟೇಶ್ ಕುಮಾರ್, ಅಪರ ಮುಖ್ಯ ಚುನಾವಣಾಧಿಕಾರಿ, ಸಿಇಒ ಕಚೇರಿ