ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಜಾರ್ಜ್ ಸ್ಪಷ್ಟನೆ

George
Published on

ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಸ್ವಲ್ಪ ಕಡಿಮೆ ಆಗಿದೆ. ಮಳೆಗಾಲದಲ್ಲಿ ಶಾಖೋತ್ಪನ್ನ ಸ್ಥಾವರ ರಿಪೇರಿಗೆ ಅವಕಾಶ ನೀಡಿದ್ದೇವೆ. ಪವನ ವಿದ್ಯುತ್ ಉತ್ಪಾದನೆ ಕೂಡ ಸ್ವಲ್ಪ ಕಡಿಮೆ ಆಗಿದೆ. ಈಗ ಸುಧಾರಣೆ ಕಾಣುತ್ತಿದೆ. ಹಿಂಗಾರು ಮಳೆ ಸ್ವಲ್ಪ ದಿನ ಬಂದರೆ ಸರಿಯಾಗುತ್ತದೆ. ವಿದ್ಯುತ್ ಕೊರತೆ ಇರುವ ಕಡೆ ನಾವು ಖರೀದಿ ಮಾಡುತ್ತಿದ್ದೇವೆ ಎಂದರು.

ಕೆಲವರು ಸುಖಾಸುಮ್ಮನೆ ಏನೇನೋ ಹೇಳುತ್ತಿದ್ದಾರೆ. ನಾಲ್ಕು ವರ್ಷದಿಂದ ಅವರು ಏನು ಮಾಡಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಜಾರ್ಜ್ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net