ಯಾವುದೇ ಅತಿಕ್ರಮಣ ನಿರ್ಮಾಣ ಮಾಡಿಲ್ಲ ಎಂದ ಕಂಗನಾ

Kangana Final
Published on

ಸೋಮವಾರ ಸಂಜೆಯಷ್ಟೇ ಕಂಗನಾ ಅವರು ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದ ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಈಗ ಕಂಗನಾ ಅವರ ಕಚೇರಿಯನ್ನು ಪಾರ್ಶ್ವವಾಗಿ ಒಡೆದಿದ್ದಾರೆ.

ಈ ವಿಷಯವಾಗಿ, ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತೀಚೆಗಷ್ಟೇ ಕಂಗನಾ ಅವರ ಕಚೇರಿಯ ಎದುರಿಗೆ ನೋಟೀಸ್​ ಅಂಟಿಸಿ ಬಂದಿದ್ದರು. ಈ ನೋಟೀಸ್​ನಲ್ಲಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಕಂಗನಾ ಅವರು 24 ಗಂಟೆಗಳಲ್ಲಿ ಉತ್ತರ ಕೊಡೆದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿತ್ತು.

ಬೃಹತ್​ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು. 'ನಾನು ಯಾವುದೇ ಅತಿಕ್ರಮ ನಿರ್ಮಾಣ ಮಾಡಿಲ್ಲ. ಪಾಲಿಕೆಯ ಅನುಮತಿ ಪಡೆದೇ ಕಚೇರಿ ನಿರ್ಮಿಸಿದ್ದೇನೆ. ಆದರೂ ಇಂದು ಅವರು ನನ್ನ ಕಚೇರಿಗೆ ರೇಡ್​ ಮಾಡಿದ್ದಾರೆ. ನಾಳೆ ನನ್ನ ಕನಸಿನ ಕಚೇರಿ ಒಡೆದರೂ ಆಶ್ಚರ್ಯವಿಲ್ಲ' ಎಂದು ಹೇಳಿದ್ದರು.

ಅದರ ನಡುವೆಯೇ ಇಂದು ಕಂಗನಾ ಅವರ ಕಚೇರಿಯಲ್ಲಿ ಎಲ್ಲೆಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಲಾಗಿದೆಯೋ, ಅಲ್ಲೆಲ್ಲಾ ಒಡೆಯಲಾಗಿದೆ. ಕಟ್ಟಡ ಒಡೆಯುವುದಕ್ಕೆ ಬಂದಿರುವವರನ್ನು ಬಾಬರನ ಸೈನ್ಯ ಎಂದು ಕರೆದಿರುವ ಕಂಗನಾ, 'ನನ್ನ ಕಚೇರಿಯಲ್ಲಿ ಯಾವುದೇ ಅತಿಕ್ರಮ ನಿರ್ಮಾಣವಾಗಿಲ್ಲ. ಅಷ್ಟೇ ಅಲ್ಲ, ಕೋವಿಂಡ್​ನಿಂದಾಗಿ ಸೆಪ್ಟೆಂಬರ್​ 30ರವರೆಗೆ ಯಾವುದೇ ಡೆಮಾಲಿಶನ್​ ಮಾಡಬಾರದು ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಹೀಗಿರುವಾಗ ನನ್ನ ಕಚೇರಿ ಒಡೆದಿದ್ದು ಯಾಕೆ' ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಯಿಂದ ಮುಂಬೈ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿದೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net